Advertisement
ಯಾವೊಬ್ಬ ರೋಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಾಗ, ಭಾವೋದ್ವೇಗಕ್ಕೆ ಒಳಗಾದ ಆ ರೋಗಿಯ ಕುಟುಂಬ ವೈದ್ಯರ ಮೇಲೆ ಮುಗಿಬೀಳುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿವೆ. ಹಾಗಂತಾ, ಕಾಯ್ದೆ ಅಥವಾ ಕಾನೂನುಗಳ ಮೂಲಕ ಅಂತಹವರನ್ನು ಹತ್ತಿಕ್ಕುವುದು ಸರಿಯಾದ ಕ್ರಮವಲ್ಲ. ಸ್ವಪ್ರತಿಷ್ಠೆ ಬದಿಗೊತ್ತಿ, ದುಃಖದಲ್ಲಿರುವವರ ಸ್ಥಾನದಲ್ಲಿ ನಿಂತು ಯೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
Related Articles
Advertisement
ಇದೇ ಸಂದರ್ಭದಲ್ಲಿ ಡಾ.ಎಸ್. ಶ್ರೀಕಂಠ, ಡಾ.ಎಂ. ಗೋವಿಂದರಾಜ, ಡಾ.ರಿಯಾಜ್ ಬಾಷಾ ಸರ್ದಾರ್, ಡಾ.ಶ್ರೀನಿವಾಸ್ ಜಿ. ಕಾಶಿ, ಡಾ.ಕೆ.ಎಚ್. ಜ್ಞಾನೇಂದ್ರಪ್ಪ, ಡಾ.ಸುಮತಿ ಕೆ. ಭಟ್ ಅವರಿಗೆ “ಡಾ.ಬಿ.ಸಿ. ರಾಯ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ, ಸಂಸ್ಥೆಯ ಬೆಂಗಳೂರು ಶಾಖೆ ಅಧ್ಯಕ್ಷ ಡಾ.ಎಸ್. ಶ್ರೀನಿವಾಸ, ಬಿಎಂಸಿಆರ್‌ಐ ನಿರ್ದೇಶಕ ಡಾ.ಎಚ್.ಎಸ್. ಸತೀಶ್ ಮತ್ತಿತರರು ಉಪಸ್ಥಿತರಿದ್ದರು. ಡಾಕ್ಟರ್‌ಗಳಿಗೇ ಮಂತ್ರಿಯಾದೆ!: ಡಾಕ್ಟರ್ ಆಗುವ ಕನಸು ಕಂಡ ನಾನು, ಡಾಕ್ಟರ್‌ಗಳಿಗೇ ಮಂತ್ರಿಯಾದೆ. ಇದು ಪ್ರಜಾಪ್ರಭುತ್ವದ ವೈಶಿಷ್ಟé ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು. ಎಸ್ಸೆಸ್ಸೆಲ್ಸಿ ಪೂರೈಸಿದ ನಂತರ ನನ್ನ ಅಣ್ಣನಂತೆ ನಾನೂ ವೈದ್ಯನಾಗಬೇಕು ಎಂಬ ಆಶೆ ಇತ್ತು. ಇದಕ್ಕಾಗಿ ಪ್ರಥಮ ಪಿಯುಸಿ ವಿಜ್ಞಾನದಲ್ಲಿ ಪ್ರವೇಶ ಪಡೆದೆ. ಆದರೆ ಅದನ್ನು ಅರ್ಧಕ್ಕೇ ಕೈಬಿಟ್ಟು, ಕಲಾ ವಿಭಾಗದಲ್ಲಿ ಮತ್ತೆ ಪ್ರವೇಶ ಪಡೆದು ಕಾನೂನು ಪದವಿ ಪೂರೈಸಿದೆ. ವೈದ್ಯನಾಗುವ ಆಸೆ ಕೈಗೂಡಲಿಲ್ಲ. ಆದರೆ, ವೈದ್ಯರ ಮಂತ್ರಿಯಾಗಿ ಕಾರ್ಯನಿರ್ವಹಿಸಲು ನನಗೆ ಹಿಂದಿನ ಸರ್ಕಾರದಲ್ಲಿ ಅವಕಾಶ ಸಿಕ್ಕಿತ್ತು ಎಂದು ಮೆಲುಕು ಹಾಕಿದರು.