ಚೆನ್ನೈ: ವಿಘ್ನೇಶ್ ಶಿವನ್ – ನಯನತಾರಾ ಕಾಲಿವುಡ್ ಸಿನಿರಂಗದ ಕ್ಯೂಟ್ ಜೋಡಿಗಳಲ್ಲೊಂದು. ದಂಪತಿ ತಮ್ಮ ಅವಳಿ ಮಕ್ಕಳೊಂದಿಗೆ ಮೊದಲ ಓಣಂ ಹಬ್ಬವನ್ನು ಆಚರಿಸುತ್ತಿದ್ದು ಈ ಸುಂದರ ಕ್ಷಣದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿಘ್ನೇಶ್ ಶಿವನ್ – ನಯನತಾರಾ ಅವಳಿ ಗಂಡು ಮಕ್ಕಳಾದ ಉಯಿರ್ ಮತ್ತು ಉಲಗಂ ಅವರ ಜೊತೆ ಮೊದಲ ಓಣಂ ಹಬ್ಬವನ್ನು ಆಚರಿಸಿದ್ದಾರೆ. ಮಕ್ಕಳು ಸಾಂಪ್ರದಾಯಿಕ ಧೋತಿ, ಚಿನ್ನದ ಸರ ಮತ್ತು ಬಳೆಗಳನ್ನು ಧರಿಸಿ ಹಬ್ಬದ ಊಟವನ್ನು ಸವಿಯುತ್ತಿರುವ ಫೋಟೋವನ್ನು ವಿಘ್ನೇಶ್ ಶಿವನ್ ಅವರು ಹಂಚಿಕೊಂಡಿದ್ದಾರೆ.
ಇನ್ನು ಹಬ್ಬಕ್ಕಾಗಿ ನಯನತಾರಾ ಬಿಳಿ ಸಲ್ವಾರ್ ಕಮೀಜ್ ಧರಿಸಿದ್ದರೆ, ವಿಘ್ನೇಶ್ ಶಿವನ್ ಬಿಳಿ ಶರ್ಟ್ ಮತ್ತು ಧೋತಿ ಧರಿಸಿದ್ದಾರೆ. ಈ ವೇಳೆ ದಂಪತಿ ತಮ್ಮ ಫೋಟೋ ಹಂಚಿಕೊಂಡು ಹಬ್ಬದ ಶುಭಾಶಯವನ್ನು ಕೋರಿದ್ದಾರೆ.
“ನನ್ನ ಉಯಿರ್ ಮತ್ತು ಉಲಗಂ ಜೊತೆ ಮೊದಲ ಓಣಂ” ಎಂದು ವಿಘ್ನೇಶ್ ಬರೆದುಕೊಂಡಿದ್ದಾರೆ.
“ನಮ್ಮ ಅತ್ಯಂತ ಸರಳ, ಸುಂದರ ಜೀವನದಲ್ಲಿ! ವಿಶೇಷವಾದ ಓಣಂ ಹಬ್ಬವನ್ನು ಅನುಭವಿಸುವ ಒಂದು ಸುಂದರ, ಸರಳ ಕ್ಷಣವು ಇಲ್ಲಿ ಆರಂಭವಾಗುತ್ತದೆ ನನ್ನ Uyirs & Ulagamsss ಜೊತೆಗೆ ಎಲ್ಲರಿಗೂ ಅಡ್ವಾನ್ಸ್ ಆಗಿ ಓಣಂ ಹಬ್ಬದ ಶುಭಾಶಯಗಳು ಎಂದು ವಿಘ್ನೇಶ್ ಪತ್ನಿ ನಯನತಾರಾ ಜೊತೆಗಿನ ಫೋಟೋವನ್ನು ಹಂಚಿಕೊಂಡು ವಿಶ್ ಮಾಡಿದ್ದಾರೆ.
ವಿಘ್ನೇಶ್ ಶಿವನ್ ಮತ್ತು ನಯನತಾರಾ ಮೊದಲ ಬಾರಿಗೆ 2015 ರಲ್ಲಿʼ ನಾನು ರೌಡಿ ಧಾನ್ʼ ಸೆಟ್‌ನಲ್ಲಿ ಭೇಟಿಯಾಗಿದ್ದರು. ಜೂನ್ 9, 2022 ರಂದು ವಿವಾಹವಾದರು. ಅವರು ಅವಳಿ ಗಂಡು ಮಕ್ಕಳಾದ ಉಯಿರ್ ಉಲಗಂ ಎಂಬ ಅವಳಿ ಮಕ್ಕಳನ್ನು ಅಕ್ಟೋಬರ್ 9, 2022 ರಂದು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು.