Advertisement
ಬೇಕಾಗುವ ವಸ್ತುಗಳು: ಇಸ್ಪೀಟ್ ಕಾರ್ಡ್, ಅಂಟು ಹಾಗೂ ಸುಲಭವಾಗಿ ಮಡಚಿಕೊಳ್ಳುವಂಥ ಪಾರದರ್ಶಕ ಪ್ಲಾಸ್ಟಿಕ್ ತುಣುಕು.
ಜಾದೂಗಾರ ಕೈಯಲ್ಲಿ ಒಂದು ಇಸ್ಪೀಟ್ ಕಾರ್ಡ್ ಹಿಡಿದಿರುತ್ತಾನೆ. ಅದನ್ನು ಎಲ್ಲರಿಗೂ ಎತ್ತಿ ತೋರಿಸುತ್ತಾನೆ. ನಂತರ ಅದನ್ನು ಅಂಗೈ ಮೇಲೆ ಇಟ್ಟುಕೊಂಡು, ಜಾದೂಮಂತ್ರ ಪಠಿಸುತ್ತಾನೆ. ಆಗ ಆ ಇಸ್ಪೀಟ್ ಕಾರ್ಡ್ ನಿಧಾನಕ್ಕೆ ಮೇಲೆ ಎದ್ದು ಬರುತ್ತದೆ. ತಯಾರಿ:
ಈ ಜಾದೂವಿನ ರಹಸ್ಯ ಅಡಗಿರುವುದು ಇಸ್ಪೀಟ್ ಕಾರ್ಡ್‌ನ ಹಿಂಭಾಗದಲ್ಲಿ. ಅದೇನೆಂದರೆ, ಜಾದೂ ಪ್ರದರ್ಶನಕ್ಕಿಂತ ಮೊದಲು ಇಸ್ಪೀಟ್ ಕಾರ್ಡ್‌ನ ಹಿಂದೆ ಗ್ಲೂ ಡಾಟ್ ಅಥವಾ ಅಂಟು ಬಳಸಿ ಒಂದು ಪಾರದರ್ಶಕ ಪ್ಲಾಸ್ಟಿಕ್ ಪೀಸ್(ರಟ್‌ನಷ್ಟು ಗಾತ್ರದ್ದು) ಅನ್ನು ಅಂಟಿಸಿ. ಕಾರ್ಡ್‌ಅನ್ನು ಕೈಯಲ್ಲಿ ಹಿಡಿದಾಗ, ಆ ಪ್ಲಾಸ್ಟಿಕ್ ತುಣುಕು ನಿಮ್ಮ ಹೆಬ್ಬೆರಳು ಹಾಗೂ ಉಳಿದ ಬೆರಳುಗಳಿಗೆ ತಾಗುವಂತಿರಬೇಕು ಹಾಗೂ ಸುಲಭವಾಗಿ ಮಡಚಿಕೊಳ್ಳುವಂತಿರಬೇಕು. ನೀವು ಆ ಪ್ಲಾಸ್ಟಿಕ್ ಅನ್ನು ನಿಧಾನವಾಗಿ ಒಳಗೆ ತಳ್ಳಿದಾಗ, ಇಸ್ಪೀಟ್ ಕಾರ್ಡ್ ತನ್ನಿಂತಾನೇ ಮೇಲೆದ್ದು ಬರುತ್ತದೆ. ಅದು ನೋಡುಗರಿಗೆ ಕಾರ್ಡ್ ಗಾಳಿಯಲ್ಲಿ ಚಲಿಸುತ್ತಿದೆ ಎಂದೆನಿಸುತ್ತದೆ.
ಈ ಜಾದೂ ಪ್ರದರ್ಶನಕ್ಕೆ ಮುನ್ನ ಹತ್ತಾರು ಬಾರಿ ನಿಮ್ಮಷ್ಟಕ್ಕೆ ನೀವು ಪ್ರಯೋಗ ಮಾಡಿ ಕೈ ಚಳಕವನ್ನು ಕರಗತ ಮಾಡಿಕೊಳ್ಳಿ.
Related Articles
Advertisement