ಹೊಸದಿಲ್ಲಿ : ಅಹ್ಮದಾಬಾದ್ ರೈಲು ನಿಲ್ದಾಣದಲ್ಲಿ ಇಂದು ಗುರುವಾರ ಬಾಂಬ್ ಬೆದರಿಕೆ ಪತ್ತೆಯಾದುದನ್ನು ಅನುಸರಿಸಿ ಭದ್ರತಾ ಪಡೆಗಳು ಚುರುಕಿನಿಂದ ಕಾರ್ಯೋನ್ಮುಖರಾಗಿ ಕಟೆಚ್ಚ ವಹಿಸಿದವು.
ಬಾಂಬ್ ಬೆದರಿಕೆ ಪತ್ತೆಯಾದೊಡನೆಯೇ ಶ್ವಾನ ಹಾಗೂ ಬಾಂಬ್ ಪತ್ತೆ ದಳವನ್ನು ಕರೆಸಿಕೊಂಡು ಕೂಲಂಕಷ ಶೋಧನೆಯನ್ನು ಕೈಗೊಳ್ಳಲಾಯಿತು.
ಶಂಕಾಸ್ಪದ ವಸ್ತುವೊಂದು ಪತ್ತೆಯಾದೊಡನೆಯೇ ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಹೊರಗೆ ಹೋಗುವಂತೆ ಸೂಚಿಸಲಾಯಿತು
ಗುಜರಾತ್ ವಿಧಾನಸಭಾ ಚುನಾವಣೆಗಳು ಇದೇ ಡಿ.9 ಮತ್ತು 14ರಂದು ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಇದೇ ನ.27 ಮತ್ತು ನ.29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಂಟು ಕಡೆ ಸಾರ್ವಜನಿಕ ಭಾಷಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಾಕ್ ಉಗ್ರರು ಸಮುದ್ರ ಮಾರ್ಗವಾಗಿ ಬಂದು ಸರಣಿ ಭಯೋತ್ಪಾದಕ ಕೃತ್ಯಗಳನ್ನು ಹಾಗೂ ಒಂಟಿ ತೋಳ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ ಗುಪ್ತಚರ ದಳದ ರಹಸ್ಯ ವರದಿಗಳು ತಿಳಿಸಿವೆ.