Advertisement

Security Breach: ರೋಹಿತ್ ಶರ್ಮಾರನ್ನು ತಬ್ಬಿಕೊಂಡ ಅಭಿಮಾನಿ; ಮನಗೆದ್ದ ಇಂಡಿಯಾ ಕ್ಯಾಪ್ಟನ್

08:29 AM Jun 02, 2024 | Team Udayavani |

ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಗಾಗಿ ಅಮೆರಿಕ ತಲುಪಿರುವ ಟೀಂ ಇಂಡಿಯಾ ಶನಿವಾರ ಮೊದಲ ಅಭ್ಯಾಸ ಪಂದ್ಯವಾಡಿದೆ. ನ್ಯೂಯಾರ್ಕ್ ನ ನಸ್ಸೌ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಸುಲಭ ಜಯ ಗಳಿಸಿದೆ.

Advertisement

ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅರ್ಷ್‌ದೀಪ್ ಸಿಂಗ್, ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರು ಬಾಂಗ್ಲಾ ವಿರುದ್ಧ 60 ರನ್‌ಗಳ ಜಯ ಗಳಿಸುವಲ್ಲಿ ಸಹಕಾರಿಯಾದರು. ಹೊಸದಾಗಿ ನಿರ್ಮಿಸಲಾದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭದ್ರತಾ ಉಲ್ಲಂಘನೆಗೆ ಸಾಕ್ಷಿಯಾಯಿತು.

ಭಾರತ ತಂಡ ಫೀಲ್ಡಿಂಗ್ ಮಾಡುತ್ತಿದ್ದ ಸಮಯದಲ್ಲಿ ಅಭಿಮಾನಿಯೊಬ್ಬ ನಾಯಕ ರೋಹಿತ್ ಶರ್ಮಾ ಅವರ ಬಳಿ ಬಂದ. ರೋಹಿತ್ ಅವರನ್ನು ಅಪ್ಪಿಕೊಂಡಿದ್ದ. ಕೂಡಲೇ ಓಡಿ ಬಂದ ಪೊಲೀಸರು ಆತನನ್ನು ಹಿಡಿದರು. ಆದರೆ ಎಳೆದುಕೊಂಡು ಹೋಗಬೇಡಿ ಎಂದು ರೋಹಿತ್ ಪೊಲೀಸರ ಬಳಿ ಕೇಳಿಕೊಂಡರು.

ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತವು 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ರಿಷಭ್ ಪಂತ್ 53 ರನ್, ಹಾರ್ದಿಕ್ ಪಾಂಡ್ಯ 40 ರನ್, ಸೂರ್ಯಕುಮಾರ್ ಯಾದವ್ 31 ರನ್ ಗಳಿಸಿದರು.

Advertisement

ಗುರಿ ಬೆನ್ನತ್ತಿದ ಬಾಂಗ್ಲಾ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 122 ರನ್ ಮಾತ್ರ ಗಳಿಸಿತು. ಅನುಭವಿ ಮೊಹಮದುಲ್ಲಾ ರಿಯಾದ್ 40 ಮಾಡಿದರೆ, ಶಕೀಬ್ ಅಲ್ ಹಸನ್ 28 ರನ್ ಗಳಿಸಿದರು. ಭಾರತದ ಪರ ಅರ್ಷದೀಪ್ ಮತ್ತು ಶಿವಂ ದುಬೆ ತಲಾ ಎರಡು ವಿಕೆಟ್ ಕಿತ್ತರು. ಬುಮ್ರಾ, ಸಿರಾಜ್, ಹಾರ್ದಿಕ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next