ನವದೆಹಲಿ: ಕಡಿಮೆ ಎತ್ತರದಲ್ಲಿ ಹಾರುವ ಅಪರಿಚಿತ ಡ್ರೋನ್‌ಗಳನ್ನು ಹೊಡೆದುರುಳಿಸಲು ಅಥವಾ ನಿಷ್ಕ್ರಿಯಗೊಳಿಸಲು ರಬ್ಬರ್ ಬುಲೆಟ್ ಆಧಾರಿತ “ಪಂಪ್ ಆ್ಯಕ್ಷನ್ ಗನ್’ (ಪಿಎಜಿ) ಬಳಕೆಗೆ ಭದ್ರತಾ ಪಡೆ ಮುಂದಾಗಿದೆ.
ಪ್ರಮುಖ ರಕ್ಷಣಾ ತಾಣಗಳು, ಏರ್‌ಪೋರ್ಟ್ ಮತ್ತು ಸೇನಾ ಕ್ಯಾಂಪ್‌ಗಳಲ್ಲಿ ಪಂಪ್ ಆ್ಯಕ್ಷನ್ ಗನ್‌ಗಳ ಬಳಕೆ ಉತ್ತೇಜಿ ಸಲು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್ ) ತೀರ್ಮಾನಿಸಿದೆ.
ನೆಲದಿಂದ 60-100 ಮೀಟರ್ ಎತ್ತರದವರೆಗೆ ಹಾರುವ ಡ್ರೋನ್ ಗಳನ್ನು ಪಿಎಜಿಗಳು ಸಲೀ ಸಾಗಿ ಹೊಡೆದುರುಳಿಸುತ್ತವೆ. ವಿಮಾನ ನಿಲ್ದಾಣ, ವಿದ್ಯುತ್ ಮತ್ತು ಪರಮಾಣು ಘಟಕಗಳ ಸಮೀಪ ಇಂಥ ಡ್ರೋನ್‌ಗಳ ನಿಯಂತ್ರಣಕ್ಕೆ ಇದುವರೆಗೆ ಇನ್ಸಾಸ್ ರೈಫಲ್ ನಂಥ ಮಾರಣಾಂತಿಕ ಶಸ್ತ್ರಾ ಸ್ತ್ರ ಬಳಸಲಾಗುತ್ತಿತ್ತು. ಇದರಿಂದಾಗಿ ಪ್ರದೇಶಗಳಿಗೆ ಹಾನಿ ಅಥವಾ ಸಾರ್ವಜನಿಕರಿಗೆ ಗಂಭೀರವಾಗಿ ಗಾಯಗಳಾಗುತ್ತಿದ್ದವು.
ಇದನ್ನೂ ಓದಿ:ಮಗುವಿನ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಜನವಾದಿ ಮಹಿಳಾ ಸಂಘದಿಂದ ಖಂಡನೆ
ಹೀಗಾಗಿ, ಕಡಿಮೆ ಹಾನಿಗೆ ಕಾರಣವಾಗುವ ಪಿಎಜಿಗಳ ಬಳಕೆಗೆ ಭದ್ರತಾ ಪಡೆ ಆದ್ಯತೆ ಕೊಟ್ಟಿದೆ ಎಂದು ಅಧಿ ಕಾರಿಯೊಬ್ಬರು ಅಭಿಪ್ರಾಯ ಸೂಚಿಸಿದ್ದಾರೆ.