Advertisement

ಕ್ಷಿಪಣಿ ದಾಳಿ ತಡೆಗೆ ನಗರಗಳಿಗೆ ರಕ್ಷಾ ಕವಚ

08:45 AM Jul 30, 2018 | Karthik A |

ಹೊಸದಿಲ್ಲಿ: ಶೀಘ್ರದಲ್ಲೇ ವಾಷಿಂಗ್ಟನ್‌, ಮಾಸ್ಕೋಗಳ ಮಾದರಿಯಲ್ಲೇ ನಮ್ಮ ವೆ‌ುಟ್ರೋ ನಗರಗಳೂ ಕ್ಷಿಪಣಿ ದಾಳಿ ರಕ್ಷಣಾ ವ್ಯವಸ್ಥೆ ಹೊಂದಲಿವೆ. ರಾಜಧಾನಿ ಹೊಸದಿಲ್ಲಿ, ವಾಣಿಜ್ಯ ನಗರಿ ಮುಂಬಯಿ ಸಹಿತ ಪ್ರಮುಖ ನಗರಗಳನ್ನು ಶತ್ರುಗಳ ಕ್ಷಿಪಣಿಗಳಿಂದ ಅಬೇಧ್ಯವಾಗಿಸುವ ‘ಕ್ಷಿಪಣಿ ತಡೆ ರಕ್ಷಣಾ ಕವಚ’ ನಿರ್ಮಾಣಗೊಳ್ಳಲಿದೆ.

Advertisement

ಉಗ್ರ ಸಂಘಟನೆಗಳು ಅಥವಾ ಶತ್ರು ದೇಶಗಳು ಯುದ್ಧವಿಮಾನ, ಡ್ರೋನ್‌ ಅಥವಾ ಕ್ಷಿಪಣಿಗಳನ್ನು ಹಾರಿಸಿದರೆ ಕ್ಷಿಪ್ರವಾಗಿ ಗುರುತಿಸಿ ಗಗನದಲ್ಲೇ ಹೊಡೆದುರುಳಿಸುವ ರಕ್ಷಣಾ ವ್ಯವಸ್ಥೆ ಇದು. ಅಮೆರಿಕದಿಂದ 1 ಶತಕೋಟಿ ಡಾಲರ್‌ ಮೊತ್ತದ ನ್ಯಾಶನಲ್‌ ಅಡ್ವಾನ್ಸ್ಡ್ ಸರ್ಫೇಸ್‌-ಟು-ಏರ್‌ ಮಿಸೈಲ್‌ ಸಿಸ್ಟಂ ಖರೀದಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ರಕ್ಷಣಾ ಖರೀದಿ ಸಮಿತಿ ಅನುಮತಿ ನೀಡಿದೆ.

ಪ್ರಮುಖ ನಗರಗಳ ಸುತ್ತಲೂ ನ್ಯಾಸಾಮ್‌-2 ಮೂಲಕ ‘ಮಿಸೈಲ್‌ ಶೀಲ್ಡ್‌’ ರಚಿಸುವ ಜೊತೆಯಲ್ಲೇ, ರಕ್ಷಣಾ ತಂತ್ರಗಳನ್ನೂ ಪುನಾರಚಿಸುವ, ಅಂದರೆ.. ರಾಷ್ಟ್ರಪತಿ ಭವನ, ಸಂಸತ್ತು, ನಾರ್ತ್‌ ಮತ್ತು ಸೌಥ್‌ ಬ್ಲಾಕ್‌ಗಳನ್ನು ಒಳಗೊಂಡ ‘ವಿಐಪಿ-89’ ಪ್ರದೇಶದ ಸುತ್ತಲಿನ ರಕ್ಷಣಾ ವ್ಯವಸ್ಥೆಯ ಪುನಾರಚನೆಯ ಬಗ್ಗೆಯೂ ರಕ್ಷಣಾ ಸಚಿವಾಲಯ ಯೋಚಿಸುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ. 2005ರಿಂದ ಅಮೆರಿಕದ ರಾಜಧಾನಿ ವಾಶಿಂಗ್ಟನ್‌ ಡಿಸಿಯನ್ನು ರಕ್ಷಿಸುತ್ತಿರುವುದು ನ್ಯಾಸಾಮ್‌-2 ರಕ್ಷಣಾ ವ್ಯವಸ್ಥೆ. ಇದು ರಷ್ಯಾ, ಅಮೆರಿಕ, ನಾರ್ವೆ, ಫಿನ್‌ಲ್ಯಾಂಡ್‌, ಸ್ಪೇನ್‌, ನೆದರ್‌ ಲ್ಯಾಂಡ್ಸ್‌ನಲ್ಲಿ ಅಸ್ತಿತ್ವದಲ್ಲಿದ್ದು, ಓಮಾನ್‌ ಕೂಡ ಇದನ್ನು ಅಳವಡಿಸಿಕೊಳ್ಳಲಿದೆ.

ನ್ಯಾಸಾಮ್‌ನಲ್ಲಿ ಮೂರೂ ದಿಕ್ಕಿನಲ್ಲೂ ಕೆಲಸ ಮಾಡುವ ರಾಡಾರ್‌ಗಳು, ಸಣ್ಣ ಮತ್ತು ಮಧ್ಯಮ ಅಂತರದ ಭೂಖಂಡಾಂತರ ಕ್ಷಿಪಣಿಗಳ ಜತೆ ಜತೆಗೆ ಅಗ್ನಿ ನಿರೋಧಕ ಕೇಂದ್ರಗಳು ಮತ್ತು ಕಮಾಂಡ್‌ ಕಂಟ್ರೋಲ್‌ ಘಟಕಗಳು ಇರಲಿವೆ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ‘ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆ’ಯ (ಬಿಎಂಡಿ) ಅಭಿವೃದ್ಧಿಯಲ್ಲಿ ಅಂತಿಮ ಚರಣದಲ್ಲಿರುವಾಗಲೇ ನ್ಯಾಸಾಮ್ಸ್‌ ಖರೀದಿ ನಿರ್ಧಾರ ಬಂದಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next