Advertisement
ಪ್ರತಿ ವರ್ಷ ನೂರಾರು ಕೋಟಿ ಖರ್ಚು ಮಾಡುತ್ತಿದ್ದರೂ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವ ಆರೋಪ ಪಾಲಿಕೆ ಮೇಲಿದೆ. ಮಾನವ ಸಂಪನ್ಮೂಲ ಸದ್ಬಳಕೆಯಾಗುತ್ತಿಲ್ಲ, ಕೆಲವರು ಕೆಲಸ ಮಾಡದೆ ಕೇವಲ ಹಾಜರಿ ಹಾಕುತ್ತಿದ್ದಾರೆ. ಇದರಿಂದ ಪ್ರಾಮಾಣಿಕರ ಮೇಲೆ ಹೆಚ್ಚುವರಿ ಕೆಲಸ ಬೀಳುತ್ತಿದೆ ಎನ್ನುವ ದೂರುಗಳಿದ್ದವು. ಹೀಗಾಗಿಯೇ ಪ್ರತಿಯೊಬ್ಬರ ಪೌರ ಕಾರ್ಮಿಕರಿಗೂ ಕ್ಷೇತ್ರದ ಹೊಣೆಗಾರಿಕೆ ನಿಗದಿಪಡಿಸಲಾಗಿದೆ.
Related Articles
Advertisement
ಆಟೋ ಟಿಪ್ಪರ್‌ಗಳೂ ಹಂಚಿಕೆ
ಪಾಲಿಕೆಯಲ್ಲಿರುವ 193 ಆಟೋ ಟಿಪ್ಪರ್‌ಗಳಿಗೆ ತಲಾ ಒಂದಕ್ಕೆ ಇಂತಿಷ್ಟು ಪ್ರದೇಶ, 800-1000 ಮನೆಗಳ ಕಸ ಸಂಗ್ರಹ ಹೊಣೆ ನೀಡಲಾಗಿದೆ. ಆಟೋ ಟಿಪ್ಪರ್‌ಗಳಿಗೆ ಜಿಪಿಎಸ್ ಹಾಗೂ ಜಿಯೋ ಫಿನಿಶಿಂಗ್ ಅಳವಡಿಸಲಾಗಿದೆ. ನೀಡಿದ ಪ್ರದೇಶ ಬಿಟ್ಟು ಹೊರಹೋಗುವಂತಿಲ್ಲ. ಆರೋಗ್ಯ ನಿರೀಕ್ಷಕರಿಂದ ಹಿಡಿದು ಪಾಲಿಕೆ ಆಯುಕ್ತರವರೆಗೂ ಮೇಲ್ವಿಚಾರಣೆ ನಡೆಯುತ್ತಿದ್ದು, ಎಷ್ಟು ಮನೆಗಳಿಂದ ಕಸ ಸಂಗ್ರಹಿಸಲಾಗಿದೆ ಎಂಬುದು ಆರ್‌ಎಫ್‌ಐಡಿ ರೀಡಿಂಗ್ ಮೂಲಕ ಪತ್ತೆ ಹಚ್ಚಲಾಗುತ್ತಿದೆ. ಮಹಾನಗರದ ಜನಸಂಖ್ಯೆಗೆ ತಕ್ಕಂತೆ ಪೌರಕಾರ್ಮಿಕರಿದ್ದಾರೆ. ಆದರೆ ಬಂದು ಹೋಗುವ ಜನಸಂಖ್ಯೆಗೆ ಹೋಲಿಸಿದರೆ ಸುಮಾರು 200 ಪೌರ ಕಾರ್ಮಿಕರು ಅಗತ್ಯವಾಗಿದೆ. ಕಾನೂನು ಚೌಕಟ್ಟಿನಲ್ಲಿಯೇ ಈ ಕೊರತೆ ಸರಿದೂಗಿಸಲು ಯಂತ್ರಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದ್ದಾರೆ.
ಕೆಲ ಸದಸ್ಯರ ಅಪಸ್ವರ
ಹೊಸ ವ್ಯವಸ್ಥೆಗೆ ಕೆಲ ಪಾಲಿಕೆ ಸದಸ್ಯರು ಅಪಸ್ವರ ಎತ್ತಿದ್ದಾರೆ. ತಮ್ಮ ವಾರ್ಡಿಗೆ ಹೆಚ್ಚಿನ ಪೌರಕಾರ್ಮಿಕರು ಬೇಕು ಎನ್ನುವ ಕಾರಣಕ್ಕೆ ವಿರೋಧಿಸುತ್ತಿದ್ದಾರೆ. ಹೊಸ ಬಡಾವಣೆಗಳು, ಹೊರವಲಯದ ಪ್ರದೇಶಗಳಲ್ಲಿ ಜನಸಂಖ್ಯೆ ಕಡಿಮೆಯಿರುತ್ತದೆ. ಆದರೆ ಪ್ರದೇಶ ದೊಡ್ಡದಿರುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಿರುವುದರಿಂದ ಓರ್ವ ಕಾರ್ಮಿಕನಿಂದ ದೊಡ್ಡ ಪ್ರದೇಶ ಸ್ವಚ್ಛತೆ ಕಷ್ಟ ಎನ್ನುವುದು ಕೆಲ ಸದಸ್ಯರ ಅಭಿಪ್ರಾಯ.
ಈ ವಿರೋಧದ ಹಿಂದೆ ಹೆಸರಿಗಷ್ಟೇ ಹೆಚ್ಚು ಜನರನ್ನು ತೋರಿಸಿ ಕಡಿಮೆ ಕಾರ್ಮಿಕರಿಗೆ ಕೆಲಸ ಮಾಡಿಸುತ್ತಿರುವ ಕೆಲ ಗುತ್ತಿಗೆದಾರರು ಇದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಸ್ವತ್ಛತಾ ಕಾರ್ಯದಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂಬುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ. ಮಹಾನಗರದ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದ್ದು, ಇದರ ಭಾಗವಾಗಿ ಪ್ರತಿಯೊಬ್ಬ ಪೌರಕಾರ್ಮಿಕರಿಗೆ ಇಂತಿಷ್ಟು ಪ್ರದೇಶದ ಹೊಣೆಗಾರಿಕೆ ನೀಡಲಾಗಿದೆ. ತಪ್ಪಿದರೆ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸ್ವಚ್ಛತಾ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಯಾವುದೇ ದೂರುಗಳು ಬಾರದಂತೆ ಸ್ವಚ್ಛತಾ ಕಾರ್ಯ ನಡೆಯಬೇಕು ಎಂಬುದು ಈ ವ್ಯವಸ್ಥೆಯ ಮೂಲ ಉದ್ದೇಶವಾಗಿದೆ. –ಡಾ| ಬಿ.ಗೋಪಾಲಕೃಷ್ಣ, ಪಾಲಿಕೆ ಆಯುಕ್ತ
ಹೇಮರಡ್ಡಿ ಸೈದಾಪುರ