Advertisement

ಕೊಡಗಿನಲ್ಲಿ144(3): ರೆಸಾರ್ಟ್, ಹೋಂ ಸ್ಟೇ, ಹೋಟೆಲ್ ಗಳಲ್ಲಿ ಪ್ರವಾಸಿಗರು ತಂಗುವಂತಿಲ್ಲ

01:09 AM Mar 21, 2020 | keerthan |

ಮಡಿಕೇರಿ: ಕೋವಿಡ್-19 ವೈರಸ್ ಹರಡಂತೆ ಮುಂಜಾಗೃತಾ ಕ್ರಮವಾಗಿ ಕೊಡಗು ಸಾರ್ವಜನಿಕ ಹಿತಾಸಕ್ತಿಯಿಂದ ಜಿಲ್ಲೆಯಲ್ಲಿ ಸೆಕ್ಷನ್ 144(3) ನಿಷೇಧಾಜ್ಷೆ ಜಾರಿಗೊಳಿಸಲಾಗಿದೆ.

Advertisement

ಇದು ಗಲಭೆ ಸಂದರ್ಭದಲ್ಲಿ ವಿಧಿಸುವ 144 ಸೆಕ್ಷನ್ ಆಗಿರುವುದಿಲ್ಲ. ಬದಲಾಗಿ ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ನಿಯಂತ್ರಿಸುವುದಕ್ಕೆ ಮಾತ್ರ ಈ ಸೆಕ್ಷನ್ ಜಾರಿಯಲ್ಲಿರುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಸೆಕ್ಷನ್ 144 (3) ಜಾರಿಯಲ್ಲಿದೆ.

ಗುರುವಾರದಿಂದ (ಮಾ.19) ಮಾರ್ಚ್ 31ರವರೆಗೆ ಈ ನಿಷೇಧಾಜ್ಷೆ ಜಾರಿಯಲ್ಲಿದ್ದು, ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಸೌಲಭ್ಯ ಹೊಂದಿರುವ ಎಲ್ಲಾ ರೀತಿಯ ಐಷಾರಾಮಿ ಹೋಟೆಲ್, ಹೋಟೆಲ್- ಲಾಡ್ಜ್, ರೆಸಾರ್ಟ್, ಹೋಂ ಸ್ಟೇಗಳು, ಯಾವುದೇ ಹಾಲ್ ಗಳಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರು ತಂಗುವುದನ್ನು ನಿಷೇಧಿಸಿದೆ.

ಇದೇ ರೀತಿ ಪ್ರವಾಸಿ ಸ್ಥಳಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಆದೇಶಿಸಲಾಗಿದೆ.

ಪ್ರಕರಣ ಪತ್ತೆ
ಸೌದಿ ಅರೇಬಿಯಾದಿಂದ ಬಂದಿದ್ದ ಕೊಡಗು ಮೂಲದ ವ್ಯಕ್ತಿಗೆ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಅವರಿಗೆ ಪ್ರತ್ಯೇಕವಾಗಿ ಚಿಕತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಒಟ್ಟು 15 ಸೋಂಕು ಪ್ರಕರಣಗಳು ಪತ್ತೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next