Advertisement
ಜೂ.3ರ ಸಂಜೆ 6ಗಂಟೆಯಿಂದ ಜೂ.5ರ ಬೆಳಗ್ಗೆ 6 ಗಂಟೆವರೆಗೆ 144 ಸೆಕ್ಷನ್ ಜಾರಿಯಲ್ಲಿರಲಿದೆ. ಮೆರವಣಿಗೆ ಜಾಥಾ, ರಥಯಾತ್ರೆ, ಪ್ರತಿಭಟನೆಗೆ ನಿರ್ಬಂಧ ಹೇರಲಾಗಿದೆ.
Related Articles
Advertisement
ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಭಾರತೀಯ ಪ್ರಾಚ್ಯವಸ್ತು ಸರ್ವೇ ಕ್ಷಣ ಇಲಾಖೆ ಅಧಿಕಾರಿಗಳಿಗೆ ಮೂಲ ಮೂಡಲ ಆಂಜನೇಯ ದೇಗುಲವನ್ನು ಮಸೀದಿ ಮಾಡಿಕೊಂಡಿರುವುದನ್ನು ತೆರವು ಮಾಡಬೇಕು ಎಂದು ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈ ಗೊಂಡಿಲ್ಲ. ಹೀಗಾಗಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬೆಳಗೊಳ ಸುನೀಲ್ ನೇತೃತ್ವದಲ್ಲಿ ಪಟ್ಟಣ ಠಾಣೆ ಪೊಲೀಸ್ ನಿರೀಕ್ಷಕ ಪುನೀತ್ ಅವರಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾಡಳಿತ ಮುನ್ನೆಚ್ಚರಿಕೆ ಯಾಗಿ ಸಮಜಾಯಿಷಿ ನೀಡಿ ಪ್ರತಿಭಟನೆ ಹಾಗೂ ಹೆಚ್ಚು ಜನ ಸೇರದಂತೆ ತಿಳಿಸಿದ್ದರು.
ಪ್ರತಿಭಟನೆ ನಮ್ಮ ಹಕ್ಕು
ಜೂ.4ರ ಬೆಳಗ್ಗೆ 11ಗಂಟೆಗೆ ಶ್ರೀರಂಗಪಟ್ಟಣ ಚಲೋ ನಡೆಯಲಿದೆ. ನಮ್ಮನ್ನು ಹತ್ತಿಕ್ಕಲು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಆದರೂ ನಾವು ಬಿಡುವುದಿಲ್ಲ ಜಿಲ್ಲೆಯ ಹಲವಾರು ಸಂಘಟಕರು ಆಗಮಿಸಲಿದ್ದಾರೆ. ಅವರಜತೆಗೂಡಿ ಶ್ರೀರಂಗಪಟ್ಟಣ ಚಲೋ ಮುಂದುವರಿಸುತ್ತೇವೆ ಎಂದು ಭಜರಂಗದಳದ ಜಿಲ್ಲಾ ಸಂಚಾಲಕರಾದ ಬಸವರಾಜು ಹೊಸ ಆನಂದೂರು ತಿಳಿಸಿದರು.
ಮದ್ಯ ಮಾರಾಟ ನಿಷೇಧ
ಶ್ರೀರಂಗಪಟ್ಟಣದಲ್ಲಿ ಜೂ.4ರಂದು ಹಿಂದೂಪರ ಸಂಘಟನೆಗಳಿಂದ ನಡೆಯಲಿರುವ ಶ್ರೀರಂಗಪಟ್ಟಣ ಜಾಮೀಯ ಮಸೀದಿ ಚಲೋ ಪ್ರತಿಭಟನೆ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನಲ್ಲಿ ಮದ್ಯ ಮಾರಾಟ ಮಾಡದಂತೆ ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಅಶ್ವತಿ ಆದೇಶ ಹೊರಡಿಸಿದ್ದಾರೆ. ಅಂದು ನಡೆಯುವ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಭಾಗವಹಿಸ ಲಿದ್ದು ಅತಿ ಸೂಕ್ಷ್ಮ ಪ್ರದೇಶವಾಗಿರುವ ಶ್ರೀರಂಗಪಟ್ಟಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಾಗೂ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಜೂ.4ರ ಬೆಳಗ್ಗೆ 6 ಗಂಟೆಯಿಂದ 5ರ ಬೆಳಗ್ಗೆ 6ರವರೆಗೆ ಶ್ರೀರಂಗಪಟ್ಟಣ ಸೇರಿ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಂಗ್ರಹಣೆ, ಸಾಗಾಟ ನಿಷೇ ಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ದೊಡ್ಡ ಗೌಡರ ರಾಜಕೀಯ: ಖರ್ಗೆ ಎಂಟ್ರಿಯಿಂದ ಶುರುವಾಯ್ತೆ ಡಿಕೆ, ಸಿದ್ದು ಬಣಕ್ಕೆ ಭೀತಿ?
ಕಾನೂನಿನ ಚೌಕಟ್ಟಿನಲ್ಲಿ ಮದರಸದಲ್ಲಿರುವ ಜನರನ್ನು ಹೊರ ಹಾಕಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂಬ ಉದ್ದೇಶ ನಮ್ಮದಾಗಿದೆ. ಕಾರ್ಯಕರ್ತರು ಸ್ಥಳ ನಿಗದಿ ಮಾಡಿದರೆ ಆ ಸ್ಥಳದಲ್ಲಿ ಹನುಮಚಾಲೀಸ್ ಭಜನೆ ಮಾಡಿ ಪ್ರತಿಭಟಿಸಲಾಗುತ್ತದೆ. ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿ ವರ್ಗದವರು ಆಗಮಿಸಿ ನಮ್ಮ ಮನವಿ ವಿವಿರ ಪಡೆದು ಸ್ವೀಕರಿಸಲು ತಿಳಿಸಲಾಗುತ್ತದೆ. – ಸುನಿಲ್, ಬೆಳಗೊಳ ವಿಶ್ವಹಿಂದೂ ಪರಿಷತ್ತಿನ ಕಾರ್ಯದರ್ಶಿ