Advertisement

ಸೆ.7ರಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ

01:15 AM Aug 11, 2020 | mahesh |

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಸೆ.7ರಿಂದ 18ರವರೆಗೆ ಬೆಳಗ್ಗೆ 10.15ರಿಂದ 1.30 ಹಾಗೂ ಅಪರಾಹ್ನ 2.15ರಿಂದ 5.30ರ ಅವಧಿಯಲ್ಲಿ ಪರೀಕ್ಷೆ ನಡೆಯಲಿವೆ ಎಂದು ಪಿಯು ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ತಿಳಿಸಿದ್ದಾರೆ.

Advertisement

ವೇಳಾಪಟ್ಟಿ
 ಸೆ.7-ಉರ್ದು, ಸಂಸ್ಕೃತ (ಬೆಳಗ್ಗೆ), ಅಪರಾಹ್ನ ಎನ್‌ಎಸ್‌ಕ್ಯುಎಫ್ ವಿಷಯಗಳು
 ಸೆ.8-ಇತಿಹಾಸ, ಸಂಖ್ಯಾಶಾಸ್ತ್ರ ಮತ್ತು ಜೀವಶಾಸ್ತ್ರ
 ಸೆ.9-ಹಿಂದಿ (ಬೆಳಗ್ಗೆ), ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್‌, ಫ್ರೆಂಚ್‌ (ಅಪರಾಹ್ನ )
 ಸೆ.10-ಇಂಗ್ಲಿಷ್‌
 ಸೆ.11-ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್‌, ಗಣಕ ವಿಜ್ಞಾನ (ಬೆಳಗ್ಗೆ), ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಭೂಗರ್ಭಶಾಸ್ತ್ರ (ಅಪರಾಹ್ನ )
 ಸೆ.12-ಅರ್ಥಶಾಸ್ತ್ರ, ಭೌತಶಾಸ್ತ್ರ
 ಸೆ.14-ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ, ಶಿಕ್ಷಣ
 ಸೆ.15-ಕನ್ನಡ
 ಸೆ.16-ರಾಜ್ಯಶಾಸ್ತ್ರ, ಮೂಲ ಗಣಿತ
 ಸೆ.17-ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ
 ಸೆ.18-ಭೂಗೋಳಶಾಸ್ತ್ರ (ಬೆಳಗ್ಗೆ), ಮನಃಶಾಸ್ತ್ರ (ಅಪರಾಹ್ನ)

Advertisement

Udayavani is now on Telegram. Click here to join our channel and stay updated with the latest news.

Next