Advertisement

ದ್ವಿತೀಯ ಪಿಯು: ಪೂರಕ ಪರೀಕ್ಷೆಗೆ ನೋಂದಣಿ

09:50 PM Aug 01, 2022 | Team Udayavani |

ಬೆಂಗಳೂರು: ಎಪ್ರಿಲ್‌/ಮೇ-2022ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮತ್ತು ಮರು ಎಣಿಕೆ ಪ್ರಕ್ರಿಯೆಯ ಫ‌ಲಿತಾಂಶವನ್ನು ಜು.31ರಂದು ಪ್ರಕಟಿಸಲಾಗಿದೆ.

Advertisement

ಅನುತ್ತೀರ್ಣರಾಗಿರುವವರಿಗೆ ಆ.12ರಿಂದ ನಡೆಯಲಿರುವ ಪೂರಕ ಪರೀಕ್ಷೆಗೆ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದಿನ ದಂಡ ಶುಲ್ಕದೊಂದಿಗೆ ನಿಗದಿತ ಪರೀಕ್ಷಾ ಶುಲ್ಕವನ್ನು ಪಾವತಿಸಲು ಆ.4ರವರೆಗೆ ಸಮಯ ನೀಡಿದೆ.

ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರು ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಿದ ವಿದ್ಯಾರ್ಥಿಗಳ ಮಾಹಿತಿಯನ್ನು ಆ.5ರೊಳಗೆ ಸ್ಯಾಟ್ಸ್‌ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಬೇಕು ಮತ್ತು ಕೆ-2 ಚಲನ್‌ ಮೂಲಕ ಖಜಾನೆಗೆ ಶುಲ್ಕ ಸಂದಾಯ ಮಾಡಬೇಕು. ಅದೇ ದಿನ ವಿದ್ಯಾರ್ಥಿಗಳ ಅರ್ಜಿ, ಚೆಕ್‌ಲಿಸ್ಟ್‌ ಮತ್ತು ಚಲನ್‌ಗಳನ್ನು ಆಯಾ ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸಲು ತಿಳಿಸಿದೆ.

ಡಿಡಿಪಿಯು ಗಳು ಈ ಅರ್ಜಿಗಳನ್ನು ಪರಿಶೀಲಿಸಿ ಆ.6ರಂದು ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಪಿಯು ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next