Advertisement

ತಿರುಗಿ ಬಿದ್ದ ಕೊಹ್ಲಿ ಪಡೆ:7ವಿಕೆಟ್‌ ಕಳಕೊಂಡ ಆಸೀಸ್‌ ಸಂಕಷ್ಟದಲ್ಲಿ

11:41 AM Mar 07, 2017 | udayavani editorial |

ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ  ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯ ಕುತೂಹಲಕಾರಿ ಘಟ್ಟವನ್ನು ತಲುಪಿದ್ದು  ಪಂದ್ಯವನ್ನು  ಜಯಿಸಲು ಭಾರತ ಆಸ್ಟ್ರೇಲಿಯಕ್ಕೆ 188 ರನ್‌ಗಳ ವಿಜಯದ ಗುರಿಯನ್ನು ನಿಗದಿಸಿದೆ.

Advertisement

ಇಂದಿನ ನಾಲ್ಕನೇ ದಿನದಾಟದಲ್ಲಿ ಭಾರತ 274 ರನ್‌ಗಳಿಗೆ ಆಲೌಟಾಯಿತು. ಆಸ್ಟ್ರೇಲಿಯದ ಹ್ಯಾಜೆಲ್‌ವುಡ್‌ ಭಾರತದ ಆರು ವಿಕೆಟ್‌ಗಳನ್ನು ಕಿತ್ತು ಯಶಸ್ವೀ ಬೌಲರ್‌ ಎನಿಸಿಕೊಂಡರು. ಆಸ್ಟ್ರೇಲಿಯ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 276 ರನ್‌ ಮಾಡಿತ್ತು. 

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 189 ರನ್‌ಗಳಿಗೆ ಆಲೌಟಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯ ಆಟವಾಡಿದ ಭಾರತ ತನ್ನ ಆಟವನ್ನು 274 ರನ್‌ಗಳ ವರೆಗೂ ಬೆಳೆಸುವಲ್ಲಿ ಸಫ‌ಲವಾಯಿತು. ಆ ಮೂಲಕ 187 ರನ್‌ಗಳ ಲೀಡ್‌ ಭಾರತಕ್ಕೆ ದೊರಕಿತು. 

188 ರನ್‌ಗಳ ಗುರಿ ಬೆನ್ನಟ್ಟಿದ ಆಸೀಸ್‌ 103 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next