Advertisement

ಮೊಹಾಲಿ: ಹರಿಣಗಳಿಗೆ ಕೊಹ್ಲಿ ಪಡೆ ಸವಾಲು

10:51 PM Sep 17, 2019 | sudhir |

ಮೊಹಾಲಿ: ಭಾರತ-ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ದ್ವಿತೀಯ ಮುಖಾಮುಖೀ ಮೊಹಾಲಿಯಲ್ಲಿ ಬುಧವಾರ ನಡೆಯಲಿದೆ.

Advertisement

ಧರ್ಮಶಾಲಾದಲ್ಲಿ ನಡೆಯಬೇಕಾಗಿದ್ದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡಿತ್ತು. ಆದರೆ ಮೊಹಾಲಿಯಲ್ಲಿ ಮಳೆಯ ಕಾಟ ಇಲ್ಲ. ಹಾಗಾಗಿ ಅಭಿಮಾನಿಗಳು ರೋಚಕ ಹೋರಾಟವನ್ನು ಎದುರು ಕಾಣುತ್ತಿದ್ದಾರೆ.

ಭಾರತವೇ ಫೇವರಿಟ್‌
ಈವರೆಗೆ ತವರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಮೂರು ಟಿ20 ಪಂದ್ಯಗಳಲ್ಲಿ ಭಾರತ ಒಂದರಲ್ಲೂ ಗೆದ್ದಿಲ್ಲ. ಆದರೆ ಮೊಹಾಲಿ ಅಂಗಳದಲ್ಲಿ ಭಾರತವೇ ಫೇವರಿಟ್‌ ಆಗಿದೆ. ಇಲ್ಲಿ ಆಡಿದ ಹಲವು ಪಂದ್ಯಗಳಲ್ಲಿ ಭಾರತ ಜಯ ಗಳಿಸಿದೆ.

ಪಂತ್‌ಗೆ ಅವಕಾಶ
ಆರಂಭಿಕರಾದ ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮ ಸ್ಟಾರ್‌ ಆಟಗಾರರು. ರಿಷಭ್‌ ಪಂತ್‌ಗೆ ಉತ್ತಮ ನಿರ್ವಹಣೆ ನೀಡಲು ಇದೊಂದು ಉತ್ತಮ ಅವಕಾಶವಾಗಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಬೇಕಾದರೆ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಬೇಕು. ಇಲ್ಲವಾದಲ್ಲಿ ಪಂತ್‌ ಸ್ಥಾನಕ್ಕೆ ಬೇರೊಬ್ಬ ಆಟಗಾರ ಆಯ್ಕೆಯಾಗುವ ಸಾಧ್ಯತೆಯಿದೆ. ಹೊಸಬರಾದ ಶ್ರೇಯಸ್‌ ಅಯ್ಯರ್‌, ನವದೀಪ್‌ ಸೈನಿ, ರಾಹುಲ್‌ ಚಹರ್‌ ಅವರಿಗೂ ತಮ್ಮ ಪ್ರತಿಭೆಯನ್ನು ಹೊರಹಾಕಲು ಇದೊಂದು ಉತ್ತಮ ವೇದಿಕೆಯಾಗಿದೆ.

ನಾಲ್ಕನೇ ಕ್ರಮಾಂಕದ ಸ್ಥಾನಕ್ಕಾಗಿ ಕರ್ನಾಟಕದ ಮನೀಷ್‌ ಪಾಂಡೆ ಮತ್ತು ಶ್ರೇಯಸ್‌ ಅಯ್ಯರ್‌ ನಡುವೆ ಪೈಪೋಟಿ ಇದೆ. ಪ್ರಮುಖ ಸ್ಪಿನ್ನರ್‌ಗಳಾದ ಕುಲದೀಪ್‌, ಚಹಲ್‌ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜ, ಕೃಣಾಲ್‌ ಪಾಂಡ್ಯ, ರಾಹುಲ್‌ ಚಹರ್‌ ನಿರ್ವಹಣೆ ಮೇಲೆ ಕಣ್ಣಿಡಲಾಗಿದೆ. ನವದೀಪ್‌ ಸೈನಿ, ದೀಪಕ್‌ ಚಹರ್‌ ಅವರ ವೇಗದ ದಾಳಿ ಕೂಡ ಭವಿಷ್ಯದ ದೃಷ್ಟಿಯಿಂದ ಭಾರತದ ಪಾಲಿಗೆ ಮಹತ್ವದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next