Advertisement
ಇದುವರೆಗೆ ಮೊದಲ ಅಲೆಯೇ ಮುಗಿದಿಲ್ಲ. ಪ್ರಸ್ತುತ ಕೊರೊನಾ ಆರ್ಭಟದ ಎರಡನೇ ಅಲೆ ಎನ್ನುವ ಪ್ರಶ್ನೆಯೇ ಬೇಡ. ಸೋಂಕು ತೀವ್ರವಾಗಿ ಹಬ್ಬುತ್ತಿರುವುದರಿಂದ ನಾವು ಹೆಚ್ಚು ಜಾಗ್ರತೆ ವಹಿಸಬೇಕಿದೆ ಎಂದು ಖ್ಯಾತ ತಜ್ಞ ವೈದ್ಯ ಡಾ| ರಾಜೇಶ್ ಪಾರೀಖ್ “ಇಂಡಿಯಾ ಟುಡೇ ಹೆಲ್ತ್‌ಗಿರಿ ಅವಾರ್ಡ್ಸ್’ ಸಮಾರಂಭದಲ್ಲಿ ಎಚ್ಚರಿಸಿದ್ದಾರೆ.
ಕೊರೊನಾದ ಕರಾಳ ಸ್ಥಿತಿ ಕೆಲವು ತಿಂಗಳು-ಒಂದೆರಡು ವರ್ಷಗಳ ವರೆಗೂ ಇರುವ ಸಾಧ್ಯತೆ ಇದೆ. ಆದರೆ ನಾವು ಕುಗ್ಗಬಾರದು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸೇಶನ್- ಇಂಥ ಪ್ರಯತ್ನಗಳಿಂದ ಒಳ್ಳೆಯ ಫಲಿತಾಂಶ ಸಾಧ್ಯ. ಲಸಿಕೆ ಸಿಗುವ ವರೆಗೂ ನಾವು ಇವುಗಳನ್ನು ಅನುಸರಿಸಬೇಕಿದೆ ಎಂದು ಫೋರ್ಟಿಸ್ ಎಸ್ಕಾರ್ಟ್ ಹೆಲ್ತ್ ಇನ್‌ಸ್ಟಿಟ್ಯೂಟ್‌ನ ಡಾ| ಸೇಠ್ ಹೇಳಿದ್ದಾರೆ.
Related Articles
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ಪತ್ನಿ ಮೆಲಾನಿಯಾ ಟ್ರಂಪ್‌ಗ್ೂ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಅಮೆರಿಕದಲ್ಲಿ ಚುನಾವಣೆ ಪ್ರಚಾರ ತಾರಕ ಕ್ಕೇರಿರುವಾಗಲೇ ಸೋಂಕು ತಗಲಿರುವುದು ರಿಪಬ್ಲಿಕನ್ ದಿಗ್ಗಜನಿಗೆ ಚಿಂತೆ ಹೆಚ್ಚಿಸಿದೆ. “ನನಗೆ, ನನ್ನ ಪತ್ನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ವಿಚಾರ ತಿಳಿದ ತತ್‌ಕ್ಷಣದಿಂದಲೇ ನಾವು ಕ್ವಾರಂಟೈನ್‌ಗೆ ಒಳಪಟ್ಟಿದ್ದೇವೆ’ ಎಂದು ತಿಳಿಸಿದ್ದಾರೆ. ಟ್ರಂಪ್ ಮತ್ತು ಮೆಲಾನಿಯಾ ಬೇಗ ಚೇತರಿಸಿಕೊಳ್ಳುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಹಲವು ವಿಶ್ವನಾಯಕರು ಟ್ವೀಟ್ ಮೂಲಕ ಹಾರೈಸಿದ್ದಾರೆ.
Advertisement
ಪ್ರತೀ 10ರಲ್ಲಿ ಒಬ್ಬ ಭಾರತೀಯಕೊರೊನಾದಿಂದ ಅತೀ ಹೆಚ್ಚು ಸಾವುಗಳನ್ನು ಕಂಡ 3ನೇ ರಾಷ್ಟ್ರ ಭಾರತ. ಇಂದು ಕೊರೊನಾದಿಂದ ಸಾಯುತ್ತಿರುವ ವಿಶ್ವದ ಪ್ರತೀ 10 ಮಂದಿಯಲ್ಲಿ ಒಬ್ಬ ಭಾರತೀಯ ಇರುತ್ತಾನೆ. ಆದರೆ ನಮ್ಮ ಜನಸಂಖ್ಯೆಯ ಎದುರು ಈ ಸಾವಿನ ಸಂಖ್ಯೆ ಏನೇನೂ ಅಲ್ಲ. ವಿಶ್ವದಲ್ಲಿ ಪ್ರತೀ 10 ಲಕ್ಷಕ್ಕೆ 131 ಮಂದಿ ಸಾವನ್ನಪ್ಪಿದ್ದರೆ ಭಾರತದಲ್ಲಿ ಈ ಪ್ರಮಾಣ 10 ಲಕ್ಷಕ್ಕೆ ಕೇವಲ 72.