Advertisement
15,397 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 7,933 ಹುಡುಗಿಯರು ಮತ್ತು 7,464 ಮಂದಿ ಹುಡುಗರು. ಅವರಲ್ಲಿ ಒಟ್ಟು 13,485 ಮಂದಿ ತೇರ್ಗಡೆಯಾಗಿದ್ದಾರೆ. ನಿರೀಕ್ಷೆಯಂತೆ ಹುಡುಗಿಯರದೇ ಮೇಲುಗೈ.
Related Articles
Advertisement
ಜಿಲ್ಲೆಯ ಸಾಧನೆ15 ವರ್ಷಗಳಲ್ಲಿ ಏಳು ವರ್ಷಗಳನ್ನು ಬಿಟ್ಟು ಉಳಿದೆಲ್ಲ ವರ್ಷಗಳಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಇದುವರೆಗೆ ಪ್ರಥಮ, ದ್ವಿತೀಯ ಸ್ಥಾನ ಬಿಟ್ಟು ಅದಕ್ಕಿಂತ ಕೆಳಗೆ ಹೋಗದೆ ಇರುವುದೂ ವಿಶಿಷ್ಟವಾಗಿದೆ. ದ್ವಿತೀಯ ಸ್ಥಾನ ಬರುವಾಗಲೂ ದ.ಕ. ಜಿಲ್ಲೆಗಿಂತ ಬಹಳ ಅತ್ಯಲ್ಪ ಅಂತರದ ಕಡಿಮೆ ಫಲಿತಾಂಶ ಬಂದಿರುವುದು ಗೋಚರವಾಗುತ್ತದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದು ಕೊಂಡಿದೆ. ಶಿಕ್ಷಣ ಸಂಸ್ಥೆ, ಶಿಕ್ಷಕರ ಹಾಗೂ ಪೋಷಕರ, ಸಾರ್ವಜನಿಕರ ಸಹಕಾರದಿಂದ ಉತ್ತಮ ಫಲಿತಾಂಶ ಪಡೆಯು ವಂತಾಗಿದೆ. ಈ ಬಾರಿ ಪ್ರಥಮ ಸ್ಥಾನ ಪಡೆಯ ಲೇ ಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನೂ ನೀಡಲಾಗಿತ್ತು.
– ಸುಬ್ರಹ್ಮಣ್ಯ ಜೋಷಿ, ಡಿಡಿಪಿಯು, ಉಡುಪಿ ಎರಡನೇ ಸ್ಥಾನಕ್ಕಿಳಿದ ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಳೆದ ವರ್ಷ ಪ್ರಥಮ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಎರಡನೇ ಸ್ಥಾನಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು 38,069 ಮಂದಿ ವಿದ್ಯಾರ್ಥಿಗಳಲ್ಲಿ 33,088 ಮಂದಿ ಉತ್ತೀರ್ಣರಾಗಿದ್ದು, ಶೇ. 90.91 ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳು ದ.ಕ. ಜಿಲ್ಲೆಯ ಪಾಲಾಗಿದೆ. ಮೂಡಬಿದಿರೆ ಆಳ್ವಾಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಓಲ್ವಿಟಾ ಅನ್ಸಿಲ್ಲಾ ಡಿ’ಸೋಜಾ ಹಾಗೂ ಅಳಿಕೆ ಸತ್ಯಸಾಯಿ ಲೋಕಸೇವಾ ಪ.ಪೂ. ಕಾಲೇಜಿನ ಶ್ರೀಕೃಷ್ಣ ಶರ್ಮ ಕೆ. 596 ಅಂಕ ಗಳಿಸಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದರೆ, ಕೊಡಿಯಾಲ್‌ಬೈಲ್ ಕೆನರಾ ಪ.ಪೂ. ಕಾಲೇಜು ಶ್ರೀಯಾ ಶೆಣೈ 595 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾರೆ. ಪುತ್ತೂರು ಸೈಂಟ್ ಫಿಲೋಮಿನ ಪ.ಪೂ. ಕಾಲೇಜಿನ ಸ್ವಸ್ತಿಕ್ ಪಿ. 594 ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಜಾಗೃತಿ ಕೆ. ನಾಯಕ್ 592 ಅಂಕಗಳೊಂದಿಗೆ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದರೆ, ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಾದ ಪ್ರಥಮ್ ಎನ್. ಹಾಗೂ ಶಮಿತಾ ಕುಮಾರಿ ಎಸ್. 591 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಶೇಕಡಾವಾರು ಫಲಿತಾಂಶದಲ್ಲಿ ಇಳಿಕೆ
2013ರಿಂದ 2018ರ ವರೆಗಿನ ದ್ವಿತೀಯ ಪಿಯುಸಿ ಫಲಿತಾಂಶದ ಪಟ್ಟಿ ಪರಿಶೀಲಿಸಿದರೆ ಅವಿಭಜಿತ ದ.ಕ. ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಕಾಯ್ದುಕೊಂಡಿರುವುದು ವಿಶೇಷ. ದ.ಕ. ಜಿಲ್ಲೆಗೆ 2013ರಲ್ಲಿ ಶೇ. 91.76 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ, 2014, 2015, 2016ರಲ್ಲಿ ಕ್ರಮವಾಗಿ ಶೇ. 86.4, ಶೇ. 93.09, ಶೇ. 90.48 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ, 2017ರಲ್ಲಿ ಶೇ. 89. 92 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ, 2018ನೇ ಸಾಲಿನ ಫಲಿತಾಂಶದಲ್ಲಿ ಶೇ. 91.49 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಹಾಗೂ ಈ ಬಾರಿ ಶೇ. 90.91 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಲಭಿಸಿದೆ. ದ.ಕ. ಜಿಲ್ಲೆಯಲ್ಲಿ ಪಿಯುಸಿಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಯತ್ನಗಳನ್ನು ನಡೆಸಲಾಗಿದೆ. ಸ್ಥಾನದಲ್ಲಿ ಏರಿಳಿಕೆ ಸಹಜ. ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ಜಿಲ್ಲೆಗೆ ಮೊದಲ ನಾಲ್ಕು ಸ್ಥಾನ ಬಂದಿರುವುದು ಉತ್ತಮ ಸಾಧನೆಯೇ ಆಗಿದೆ.
-ಎಲ್ವಿàರಾ ಫಿಲೋಮಿನಾ,
ಪ್ರಭಾರ ಉಪ ನಿರ್ದೇಶಕಿ,ದ.ಕ. ಜಿಲ್ಲಾ ಪ.ಪೂ. ಶಿಕ್ಷಣ ಇಲಾಖೆ