ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕರಿಸಿದ ವೇಳಾ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ.
ಕೆಲವು ತಾಂತ್ರಿಕ ಕಾರಣಗಳಿಂದ ಬದಲಾವಣೆ ಮಾಡಲಾಗಿದೆ ಎಂದು ಇಲಾಖೆ ಹೇಳಿಕೊಂಡಿದೆ.
ಬದಲಾದ ಪರೀಕ್ಷಾ ದಿನಾಂಕ ಇಂತಿವೆ
ಏಪ್ರಿಲ್ 22 ರಿಂದ ಆರಂಭವಾಗಲಿದ್ದು , ಮೊದಲ ದಿನ ಲಾಜಿಕ್ , ಬ್ಯುಸಿನೆಸ್ ಸ್ಟಡೀಸ್, 23 ರಂದು ಗಣಿತ ಶಾಸ್ತ್ರ , ಶಿಕ್ಷಣ ಶಾಸ್ತ್ರ 25ರಂದು ಎಕನಾಮಿಕ್ಸ್ , 26 ರಂದು ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ಕೆಮೆಸ್ಟ್ರಿ, ಬೇಸಿಕ್ ಮಾಥ್ಸ್ 27 ರಂದು ತಮಿಳು, ತೆಲುಗು, ಮಲಯಾಳಂ, ಉರ್ದು, ಮರಾಠಿ, ಸಂಸ್ಕ್ರತ ಮತ್ತು ಫ್ರೆಂಚ್ ಭಾಷೆಗಳ ಪರೀಕ್ಷೆ, 28 ರಂದು ಕನ್ನಡ , ಅರೇಬಿಕ್ ಭಾಷೆ ಪರೀಕ್ಷೆ ನಡೆಯಲಿದೆ.
ಮೇ 04 ರಂದು ಜಿಯೋಗ್ರಫಿ , ಬಯಾಲಜಿ 05 ರಂದು ಇನ್ಫಾರ್ಮೇಷನ್ ಟೆಕ್ನಾಲಜಿ , ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ & ವೆಲ್ ನೆಸ್ 06 ರಂದು ಇಂಗ್ಲಿಷ್, 10ರಂದು ಇತಿಹಾಸ, ಫಿಸಿಕ್ಸ್ 12 ರಂದು ಪೊಲಿಟಿಕಲ್ ಸೈನ್ಸ್ , ಸ್ಟ್ಯಾಟಿಸ್ಟಿಕ್ಸ್, 14 ರಂದು ಸೋಷಿಯಾಲಜಿ , ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, 17 ರಂದು ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಜಿಯಾಲಜಿ, ಹೋಂ ಸೈನ್ಸ್ 18 ರಂದು ಹಿಂದಿ ಪರೀಕ್ಷೆ ನಡೆಯಲಿದೆ.
ಪರೀಕ್ಷೆಗಳು ಬೆಳಗ್ಗೆ 10.15 ರಿಂದ ಮಧ್ಯಾಹ್ನ 01.30 ರ ವರೆಗೆ ನಡೆಯಲಿವೆ.