Advertisement

ದ್ವಿತೀಯ ಪಿಯು ಪರೀಕ್ಷೆ: 480 ಮಂದಿ ಗೈರು

01:15 AM Mar 05, 2020 | mahesh |

ಮಂಗಳೂರು/ ಉಡುಪಿ: ಉಭಯ ಜಿಲ್ಲೆಗಳಲ್ಲಿ ಬುಧವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಮೊದಲ ದಿನವೇ ದ.ಕ. ಜಿಲ್ಲೆಯಲ್ಲಿ 338 ಮಂದಿ ಮತ್ತು ಉಡುಪಿ ಜಿಲ್ಲೆಯಲ್ಲಿ 142 ಮಂದಿ ಗೈರು ಹಾಜರಾಗಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ಇತಿಹಾಸ, ಭೌತಶಾಸ್ತ್ರ ಹಾಗೂ ಮೂಲಗಣಿತ ವಿಷಯಗಳಲ್ಲಿ ಪರೀಕ್ಷೆ ಬರೆದರು. ಯಾವುದೇ ರೀತಿಯ ಪರೀಕ್ಷಾ ಅಕ್ರಮ ನಡೆದಿಲ್ಲ.

Advertisement

ದ.ಕ. ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡ ಒಟ್ಟು 25,037 ವಿದ್ಯಾರ್ಥಿಗಳ ಪೈಕಿ 24,699 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ ಇತಿಹಾಸ ಪರೀಕ್ಷೆಗೆ ನೋಂದಣಿ ಮಾಡಿಕೊಂಡ 10,987 ವಿದ್ಯಾರ್ಥಿಗಳ ಪೈಕಿ 10,736 ಮಂದಿ ಹಾಜರಾಗಿ 251 ಮಂದಿ ಗೈರು ಹಾಜರಾಗಿದ್ದಾರೆ. ಮೂಲ ವಿಜ್ಞಾನ ಪರೀಕ್ಷೆಗೆ ನೋಂದಣಿ ಮಾಡಿಕೊಂಡ ಒಟ್ಟು 826 ವಿದ್ಯಾರ್ಥಿಗಳ ಪೈಕಿ 822 ಮಂದಿ ಹಾಜರಾಗಿ 4 ಮಂದಿ ಗೈರಾಗಿದ್ದಾರೆ. ಭೌತಶಾಸ್ತ್ರ ಪರೀಕ್ಷೆಗೆ ನೋಂದಣಿ ಮಾಡಿಕೊಂಡ ಒಟ್ಟು 13,224 ಮಂದಿ ಪೈಕಿ 13,141 ಮಂದಿ ಹಾಜರಾಗಿ 83 ಮಂದಿ ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮ ಘಟಿಸಿಲ್ಲ.

ಉಡುಪಿ: 142 ಮಂದಿ ಗೈರು
ಉಡುಪಿ: ಜಿಲ್ಲೆಯಲ್ಲಿ ಪರೀಕ್ಷೆಗೆ 10,396 ವಿದ್ಯಾರ್ಥಿಗಳ ಪೈಕಿ 10,254 ಮಂದಿ ಹಾಜರಿದ್ದರು. 142 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇತಿಹಾಸ ಪರೀಕ್ಷೆಗೆ 5223 ವಿದ್ಯಾರ್ಥಿಗಳ ಪೈಕಿ 5,100 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 123 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಭೌತಶಾಸ್ತ್ರ ಪರೀಕ್ಷೆಗೆ 4,986 ವಿದ್ಯಾರ್ಥಿಗಳ ಪೈಕಿ 4,968 ವಿದ್ಯಾರ್ಥಿಗಳು ಹಾಜರಾಗಿದ್ದರು. 18 ವಿದ್ಯಾರ್ಥಿಗಳು ಗೈರು ಹಾಜರಾಗಿ
ದ್ದರು. ಮೂಲಗಣಿತ ವಿಷಯದಲ್ಲಿ 187 ವಿದ್ಯಾರ್ಥಿಗಳ ಪೈಕಿ 186 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಓರ್ವ ವಿದ್ಯಾರ್ಥಿ ಗೈರಾಗಿದ್ದರು.

ಇಂದಿನ ಪರೀಕ್ಷೆಗೆ ಇಬ್ಬರೇ ವಿದ್ಯಾರ್ಥಿಗಳು !
ಗುರುವಾರದಂದು ತೆಲುಗು, ತಮಿಳು, ಮರಾಠಿ, ಮಲಯಾಳಂ, ಅರೇಬಿಕ್‌, ಫ್ರೆಂಚ್‌ ವಿಷಯದಲ್ಲಿ ಪರೀಕ್ಷೆ ನಡೆಯಲಿದೆ. ಈ ಪೈಕಿ ತಮಿಳು ವಿಷಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಇಬ್ಬರೇ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಎಂಜಿಎಂ ಪ.ಪೂ. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಮಾ. 7ರಂದು ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next