ಕೋಲ್ಕತ್ತಾ: ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯದಲ್ಲಿಂದು ಎರಡನೇ ಹಂತದ ಮತದಾನ ಆರಂಭವಾಗಿದೆ. ಪಶ್ಚಿಮ ಬಂಗಾಳದ ನಂದಿ ಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ನಡುವೆ ಸ್ಪರ್ಧೆಯಿದ್ದು, ಇಂದು ಮತದಾನ ನಡೆಯಲಿದೆ.
ನಂದಿಗ್ರಾಮವನ್ನೊಳಗೊಂಡ ಪೂರ್ವ ಮಿಡ್ನಾಪುರದೊಂದಿಗೆ ಪ. ಬಂಗಾಳದಲ್ಲಿ ಪಶ್ಚಿಮ ಮಿಡ್ನಾಪುರ ಭಾಗ-2, ಬಂಕುರಾ ಭಾಗ-2 ಮತ್ತು 24 ಪರಗಣಾಸ್ ಜಿಲ್ಲೆಗಳ ಒಟ್ಟು 30 ಕ್ಷೇತ್ರಗಳು 2ನೇ ಹಂತದ ಮತದಾನಕ್ಕೆ ಸಾಕ್ಷಿಯಾಗಲಿವೆ. ಬೆಳಗ್ಗೆ 8 ರಿಂದ ಸಂಜೆ 6ರವ ರೆಗೆ ಮತದಾನ ನಡೆಯಲಿದೆ. ಶಾಂತಿಯುತ ಮತದಾನಕ್ಕೆ ಒಟ್ಟು 800 ತುಕಡಿಗಳು ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿವೆ. 294 ಕ್ಷೇತ್ರವನ್ನೊಳಗೊಂಡ ಪ. ಬಂಗಾಳದಲ್ಲಿ ಒಟ್ಟು 8 ಹಂತದಲ್ಲಿ ಮತದಾನ ನಡೆಯಲಿದೆ.
ಇದನ್ನೂ ಓದಿ:ಇಂದಿನಿಂದ ಏನೇನು ಬದಲಾವಣೆ?
ಅಸ್ಸಾಂನಲ್ಲೂ 2ನೇ ಹಂತದ ಮತದಾನ ಗುರುವಾರ ನಡೆಯಲಿದ್ದು, 39 ಕ್ಷೇತ್ರ ಗಳ 345 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ. ಬಿಜೆಪಿ - 34, ಕಾಂಗ್ರೆಸ್- 28, ಅಸ್ಸಾಂ ಗಣಪರಿಷತ್-6 ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್-3 ಅಭ್ಯರ್ಥಿಗಳನ್ನು ಇಲ್ಲಿ ನಿಲ್ಲಿಸಿವೆ. ಸಚಿವರಾದ ಪರಿಮಳ್ ಶುಕ್ಲ ವೈದ್ಯ (ಧೋಲಾಯಿ), ಭಾಬೇಶ್ ಕಾಲಿಟಾ (ರಾಂಗಿಯಾ), ಪಿಜೂಶ್ ಹಝಾರಿಕ (ಜಾಗಿರೋಡ್), ಡೆಪ್ಯುಟಿ ಸ್ಪೀಕರ್ ಅಮಿನುಲ್ ಹಖ್ (ಸೊನಾಯಿ) ಅವರೊಂದಿಗೆ ಮಾಜಿ ಸ್ವೀಕರ್ ದಿಲಿಪ್ ಕುಮಾರ್ ಪೌಲ್ (ಸಿಲ್ಚಾರ್) ಅವರ ಭವಿಷ್ಯ ನಿರ್ಧಾರಗೊಳ್ಳಲಿದೆ.
ಹಿಂಸಾಚಾರ: ಪಶ್ವಿಮ ಬಂಗಾಳದಲ್ಲಿ ಇಂದೂ ಹಿಂಸಾಚಾರ ನಡೆದಿದೆ. ಚುನಾವಣೆಗೆ ಒಂದು ಕಡೆ ಮೊದಲೇ ಟಿಎಂಸಿ ಕಾರ್ಯಕರ್ತರೊಬ್ಬರನ್ನು ಇರಿದು ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ದೇಶದ ಚಿತ್ತ ನಂದಿಗ್ರಾಮ ದತ್ತ…