Advertisement
ಕೊಲಂಬೋದ “ಆರ್. ಪ್ರೇಮದಾಸ ಸ್ಟೇಡಿಯಂ’ ಬ್ಯಾಟಿಂಗಿಗೆ ಹೆಸರುವಾಸಿ. ತಿರುವು ಪಡೆಯುವು ದರಿಂದ ಸ್ಪಿನ್ ಸ್ನೇಹಿಯೂ ಹೌದು. ಈ ಎರಡೂ ಅಂಶಗಳನ್ನು ಭಾರತ ಮೊದಲ ಪಂದ್ಯದಲ್ಲಿ ಸಾಬೀತುಪಡಿಸಿದೆ. ಬಹುಶಃ ಮಂಗಳವಾರ ಇದರ ಮುಂದುವರಿದ ಭಾಗವನ್ನು ಕಾಣಲಿಕ್ಕಿದೆ.
ಭಾರತ ಮೊದಲ ಪಂದ್ಯದಲ್ಲಿ ಸರ್ವಾಂಗೀಣ ಪ್ರದ ರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ಲಂಕೆ ಯನ್ನು 250ರ ಗಡಿಯೊಳಗೆ ನಿಲ್ಲಿಸಬಹುದಿತ್ತು ಎಂದೆನಿಸಿದರೂ ಬಹಳ ಬೇಗ ಚೇಸಿಂಗ್ ಮುಗಿಸಿ ಇದೇನೂ ಸವಾಲಿನ ಮೊತ್ತವಲ್ಲ ಎಂಬುದನ್ನು ಸಾಬೀತುಪಡಿಸಿತು. ಮುನ್ನುಗ್ಗಿ ಬೀಸುವ ಛಾತಿಯ ಪೃಥ್ವಿ ಶಾ, ಚೊಚ್ಚಲ ಪಂದ್ಯದಲ್ಲೇ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್ ರವಿವಾರದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾಗಿ ಮೂಡಿಬಂದಿದ್ದರು. ಇಬ್ಬರೂ ಐಪಿಎಲ್ ಮೂಡ್‌ನಲ್ಲಿದ್ದಂತಿತ್ತು! ಹಾಗೆಯೇ ಮೊದಲ ಸಲ ಭಾರತ ತಂಡವನ್ನು ಮುನ್ನಡೆಸಿದ ಶಿಖರ್ ಧವನ್ ಇದನ್ನು ಬಹಳ ಶಾಂತ ರೀತಿಯಲ್ಲಿ ನಿಭಾಯಿಸಿದರು. ಬ್ಯಾಟಿಂಗ್‌ನಲ್ಲೂ ಹೆಚ್ಚು ಪ್ರಬುದ್ಧರಾದಂತಿತ್ತು. ತಾನು ಆಡುವ ಜತೆಗೆ ಜತೆಗಾರರನ್ನೂ ಆಡಿಸಿ ಅಜೇಯರಾಗಿ ಉಳಿದರು. ಇದು ದ್ರಾವಿಡ್ ಪಾಠ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ!
Related Articles
Advertisement
ಸರಣಿ ಸಮಬಲ ಸುಲಭವಲ್ಲ80ರ ದಶಕದ ತನ್ನ ಅಂತಾರಾಷ್ಟ್ರೀಯ ಕ್ರಿಕೆಟಿನ ಆರಂಭಿಕ ದಿನಗಳಲ್ಲಿ, 1996ರ ವಿಶ್ವಕಪ್ ಕಾಲದಲ್ಲಿ, ಬಳಿಕ ಮುರಳಿ-ಜಯವರ್ಧನ-ಸಂಗಕ್ಕರ ಜಮಾ ನಾದಲ್ಲಿ ವಿಶ್ವದ ಅತ್ಯಂತ ಬಲಿಷ್ಠ ತಂಡವಾಗಿದ್ದ ಶ್ರೀಲಂಕಾ ಈಗ ಆ ಚಾರ್ಮ್ ಸಂಪೂರ್ಣ ಕಳೆದುಕೊಂಡಿದೆ. ಸೋಲು ಸರಾಗವಾಗಿ ಈ ತಂಡದ ಮೇಲೆ ಸವಾರಿ ಮಾಡುತ್ತಿದೆ. ಕಳೆದ ಕೆಲವು ಸರಣಿಗಳಲ್ಲಿ ಇದು ನಿಚ್ಚಳವಾಗುತ್ತ ಬಂದಿದೆ. ಭಾರತದೆದುರಿನ ಸರಣಿ ಇದಕ್ಕೊಂದು ಹೊಸ ಸೇರ್ಪಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಸರಣಿಯನ್ನು ಸಮಬಲಕ್ಕೆ ತರುವುದು ಲಂಕೆಗೆ ಅಷ್ಟು ಸುಲಭವಲ್ಲ.