Advertisement

ಉಕ್ರೇನ್‌ನಲ್ಲಿ ಎರಡನೇ ಭಾರತೀಯ ವಿದ್ಯಾರ್ಥಿ ಸಾವು; ದೇಶವಾಸಿಗಳಲ್ಲಿ ಆತಂಕ

06:14 PM Mar 02, 2022 | Team Udayavani |

ಖಾರ್ಕಿವ್ : ಯುದ್ಧ ಪೀಡಿತ ಉಕ್ರೇನ್ ನಲ್ಲಿ ಎರಡು ದಿನಗಳ ಒಳಗೆ ಮತ್ತೊಬ್ಬ ಭಾರತೀಯ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿರುವ ಆಘಾತಕಾರಿ ಮಾಹಿತಿ ವರದಿಯಾಗಿದೆ.

Advertisement

ಪಂಜಾಬ್ ಮೂಲದ ಚಂದನ್ ಜಿಂದಾಲ್ (22) ಸಾವನ್ನಪ್ಪಿರುವ ವಿದ್ಯಾರ್ಥಿಯಾಗಿದ್ದು, ಇಸ್ಕೆಮಿಕ್ ಸ್ಟ್ರೋಕ್‌ನಿಂದ ಬಳಲುತ್ತಿರುವ ನಂತರ ವಿನ್ನಿಟ್ಸಿಯಾ ತುರ್ತು ಆಸ್ಪತ್ರೆಗೆ ದಾಖಲಾಗಿದ್ದು,ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಚಂದನ್ ಮೃತದೇಹವನ್ನು ತರಲು ವ್ಯವಸ್ಥೆ ಮಾಡುವಂತೆ ಅವರ ತಂದೆ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಒಂದು ದಿನದ ಹಿಂದೆ ಖಾರ್ಕಿವ್‌ನಲ್ಲಿ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ ಹಾವೇರಿಯ ವಿದ್ಯಾರ್ಥಿ ನವೀನ್‌ ಶವವನ್ನು ಮರಳಿ ತರಲು ಕೇಂದ್ರವು ಪ್ರಯತ್ನಗಳನ್ನು ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next