ಬರುವವರೆಗೂ ಏನೂ ನಡೆದಿರುವುದಿಲ್ಲ. ಹೀರೋ ಬಿಲ್ಡಪ್, ಸಾಂಗ್, ಫೈಟ್, ಕಾಮಿಡಿ … ಬಹುತೇಕ ಇಂತಹ ದೃಶ್ಯಗಳಲ್ಲೇ ಮೊದಲಾರ್ಧವನ್ನು ಮುಗಿಸಿಬಿಟ್ಟಿರುತ್ತಾರೆ. ಸಿನಿಮಾ ಏನಿದ್ದರೂ ಸೆಕೆಂಡ್‌ಹಾಫ್ನಲ್ಲಿ ಬಿಚ್ಚಿಕೊಳ್ಳುತ್ತದೆ ಮತ್ತು ಇಡೀ ಸಿನಿಮಾದ ಜೀವಾಳ ಕೂಡಾ ಅದೇ. ಅಲ್ಲಿಗೆ ಒಂದಂಶ ಸ್ಪಷ್ಟ. ಇತ್ತೀಚಿನ ಸಿನಿಮಾಗಳನ್ನು ಕೈ ಹಿಡಿಯುತ್ತಿರೋದು ಸೆಕೆಂಡ್ ಹಾಫ್. ಹಾಗಾಗಿ, ಸೆಕೆಂಡ್ ಹಾಫ್ ಸ್ಟ್ರಾಂಗ್ ಗುರು ಎನ್ನುವಂತಾಗಿದೆ.
Advertisement
ನಿರ್ದೇಶಕರು ಕಥೆ ಮಾಡಿಕೊಂಡಿರೋದಿಲ್ಲವೋ ಅಥವಾ ಇದ್ದ ಕಥೆಯನ್ನು ನಿರೂಪಿಸುವಲ್ಲಿ ಎಡವುತ್ತಿದ್ದಾರೋ, ಒಟ್ಟಿನಲ್ಲಿ ಬಹುತೇಕ ಸಿನಿಮಾಗಳಮೊದಲರ್ಧ ಜಾಳು ಜಾಳು. ಒಂದಿಷ್ಟು ಕಥೆ ಪ್ರೇಕ್ಷಕರಿಗೆ ಸಿಕ್ಕರೆ ಅದು ದ್ವಿತೀಯಾರ್ಧದಲ್ಲಿ. ಹಾಗಂತ ಕೆಲವೊಮ್ಮೆ ಸೆಕೆಂಡ್‌ಹಾಫ್ ಕೂಡಾ
ಕೈ ಕೊಡುತ್ತದೆ. ನಿರ್ದೇಶಕರು ಸೆಕೆಂಡ್ ಹಾಫ್ ನಲ್ಲೂ ಫಸ್ಟ್ ಹಾಫ್ ಕಾಮಿಡಿ ಶೋಗಳನ್ನೇ ರಿಪೀಟ್ ಮಾಡಿ, ಕ್ಲೈಮ್ಯಾಕ್ಸ್‌ನಲ್ಲಿ ಇಡೀ ಪಿಕ್ಚರ್ ತೋರಿಸಿಬಿಡುತ್ತಾರೆ. ಅದೇನೇ ಆದರೂ ಸದ್ಯ ಸಿನಿ ಪ್ರೇಮಿಗಳ ಹಾಗೂ ಸಿನಿಮಂದಿಯ ನಂಬಿಕೆ ಎಂದರೆ ಕೊನೆಪಕ್ಷ ಸೆಕೆಂಡ್‌ಹಾಫ್ ಚೆನ್ನಾಗಿರಬಹುದು ಮತ್ತು ಸೆಕೆಂಡ್‌ಹಾಫ್ ಚೆನ್ನಾಗಿದ್ದರೂ ಸಿನಿಮಾ ಓಡಬಹುದೆಂಬುದು.
ಕಾರಣಗಳು ಇರದೇ ಹೋದರೂ ಸಿನಿಮಾದ ಅವಧಿ ಪ್ರಮುಖವಾಗಿರುತ್ತದೆ. ಸಾಮಾನ್ಯವಾಗಿ ಒಂದು ಸಿನಿಮಾ ಎಂದರೆ ಎರಡು ಗಂಟೆ ಇಪ್ಪತ್ತು ನಿಮಿಷ ಇರಬೇಕೆಂಬ ಅಲಿಖೀತ ನಿಯಮದಂತೆ ಬಹುತೇಕ ಎಲ್ಲಾ ಸಿನಿಮಾಗಳು ಅದೇ ಅವಧಿಯೊಂದಿಗೆ ಬರುತ್ತಿವೆ. ಅದಕ್ಕೆ ಕಾರಣ ಚಿತ್ರಮಂದಿರಗಳಲ್ಲಿನ ಶೋ ಅವಧಿ. ಬೆಳಗ್ಗಿನ ಶೋಗೂ ಮಧ್ಯಾಹ್ನದ ಶೋಗೂ ಸಮಯ ಹೊಂದಾಣಿಕೆಯಾಗಬೇಕೆಂಬ ಕಾರಣಕ್ಕೆ ಚಿತ್ರಮಂದಿರಗಳು ಕೂಡಾ ಸಿನಿಮಾದ ಅವಧಿಯ ಬಗ್ಗೆ ಗಮನಹರಿಸುತ್ತವೆ. ನೀವು 90 ನಿಮಿಷದ ಸಿನಿಮಾ ಮಾಡಿದರೆ ಅದು ಬೇಗನೇ ಮುಗಿದು ಹೋಗುತ್ತದೆ. ಇನ್ನೊಂದು ಶೋ ಆರಂಭವಾಗುವ ಮಧ್ಯೆ ಸಾಕಷ್ಟು ಸಮಯವಿರುತ್ತದೆ. ಈ ಕಾರಣದಿಂದ ಚಿತ್ರಮಂದಿರದ ಆಶಯದ ಜೊತೆಗೆ ಅಲಿಖೀತ
ನಿಯಮದಂತೆ ಬಹುತೇಕ ಸಿನಿಮಾಗಳು ಎರಡು ಗಂಟೆ 20 ನಿಮಿಷ ಅಥವಾ ಎರಡು ಗಂಟೆ 10 ನಿಮಿಷದ ಅವಧಿಯಲ್ಲೇ ತಯಾರಾಗುತ್ತಿವೆ. ಹಾಗೆ ನೋಡಿದರೆ ಎರಡು ಗಂಟೆ ಒಂದು ಸಿನಿಮಾಕ್ಕೆ ಬೋರ್ ಹೊಡೆಸುವ ಅವಧಿಯಲ್ಲ. ಆದರೆ, ಇಲ್ಲಿ ಮುಖ್ಯವಾಗುವುದು ಚಿತ್ರಕಥೆ ಮತ್ತು ನಿರ್ದೇಶಕನ ಜಾಣ್ಮೆ. ಆತ ಎರಡು ಗಂಟೆ ಅವಧಿಯಲ್ಲಿ ಇಡೀ ಸಿನಿಮಾವನ್ನು ಹೇಗೆ ಕಟ್ಟಿಕೊಡುತ್ತಾನೆಂಬುದರ ಮೇಲೆ ಇಡೀ ಸಿನಿಮಾದ ಭವಿಷ್ಯ ನಿಂತಿರುತ್ತದೆ. ಮೊದಲೇ ಹೇಳಿದಂತೆ ಅನೇಕ ನಿರ್ದೇಶಕರಲ್ಲಿ ಕಥೆಯೇ ಇರೋದಿಲ್ಲ. ಇರೋ ಒನ್‌ಲೈನ್‌ನಲ್ಲಿ ಇಡೀ ಸಿನಿಮಾವನ್ನು ಬೆಳೆಸುತ್ತಾ ಹೋಗಬೇಕಾದ ಹಾಗೂ ಎರಡು ಗಂಟೆ ಅವಧಿಗೆ ಸಿನಿಮಾ ಕೊಡಬೇಕಾದ ಅನಿವಾರ್ಯತೆ ಇರುತ್ತದೆ. ಇದೇ ಕಾರಣದಿಂದ ಎಡಿಟಿಂಗ್ ಟೇಬಲ್‌ನಲ್ಲಿ ಕುಳಿತ
ನಿರ್ದೇಶಕರು, ಮೊದಲರ್ಧದಲ್ಲಿ ಕಾಮಿಡಿ, ಫೈಟ್, ಹೀರೋ ಬಿಲ್ಡಪ್ …
Related Articles
Advertisement
ಕೆಲವು ಸಿನಿಮಾಗಳ ಫಸ್ಟ್ ಹಾಫ್ನಲ್ಲಿ ಏನೂ ಇಲ್ಲದಿದ್ದರೂ ಕಡೆಪಕ್ಷ ಸೆಕೆಂಡ್ ಹಾಫ್ನಲ್ಲಾದರೂ ಪ್ರೇಕ್ಷಕರನ್ನು ಸಂತುಷ್ಟನನ್ನಾಗಿಸುತ್ತವೆ. ಆದರೆ, ಒಂದಷ್ಟು ಸಿನಿಮಾಗಳು ಇಡೀ ಸಿನಿಮಾದಲ್ಲಿ ಏನನ್ನೂ ಹೇಳದೇ ಕೊನೆಗೆ “ಪಾರ್ಟ್-2′ ಎಂದು ಹೇಳುತ್ತಾ, ಮುಂದುವರೆದ ಭಾಗದಲ್ಲಿ ಹೇಳುವ ಸೂಚನೆ ನೀಡುತ್ತದೆ. ಅಲ್ಲಿಗೆ ಎರಡನೇ ಭಾಗದಲ್ಲಿ ಹೇಳಲು ಇಡೀ ಒಂದು ಸಿನಿಮಾವನ್ನೇ ಪೀಠಿಕೆಯನ್ನಾಗಿಸಿದಂತಾಗುತ್ತದೆ. ಇಂತಹ ಸಿನಿಮಾಗಳಿಂದ ಪ್ರೇಕ್ಷಕ ಏನನ್ನೂ ನಿರೀಕ್ಷಿಸಲಾಗುವುದಿಲ್ಲ.
ಚಿತ್ರಮಂದಿರದೊಳಗೆ ಬರುವ ಪ್ರೇಕ್ಷಕ ಬಯಸೋದು ಒಳ್ಳೆಯ ಸಿನಿಮಾ ಹಾಗೂ ನೋಡಿಸಿಕೊಂಡು ಹೋಗುವ ಗುಣವನ್ನಷ್ಟೇ. ಆತ ನಿಮ್ಮ ಸಿನಿಮಾದ ಅವಧಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದೆಷ್ಟೋ ಸಿನಿಮಾಗಳ ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರು ಇವತ್ತಿಗೂ ನೆನಪಿನಲ್ಲಿಟ್ಟಿದ್ದಾರೆಂದರೆ ಅದಕ್ಕೆ ಕಾರಣ ಆ ದೃಶ್ಯಗಳು ಮೂಡಿಬಂದ ರೀತಿ. ಅದರಂತೆ, ಮೊದಲರ್ಧ, ದ್ವಿತೀಯಾರ್ಧ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಒಳ್ಳೆಯ ಸಿನಿಮಾವನ್ನಷ್ಟೇ ಕಟ್ಟಿಕೊಡಬೇಕೆಂಬ ಉದ್ದೇಶದೊಂದಿಗೆ ಸಿನಿಮಾ ಮಾಡಿದರೆ, ಆಗ “ಹಾಫ್’ಗಳ ಮಾತೇ ಬರೋದಿಲ್ಲ.
ರವಿಪ್ರಕಾಶ್ ರೈ