Advertisement
ಕೊವಿಶೀಲ್ಡ್‌ನ ಮೊದಲ ಡೋಸ್ ಪಡೆದ ಬಳಿಕ 2ನೇ ಡೋಸ್ ಪಡೆ ಯುವ ಅವಧಿಯನ್ನು 12-16 ವಾರ ಗಳಿಗೆ ವಿಸ್ತರಿಸಿ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಲಾಗಿದೆ. ಜತೆಗೆ ಕೋವಿನ್ ವೆಬ್‌ಸೈಟ್‌ನಲ್ಲಿ ಕೂಡ ಅದಕ್ಕೆ ಸಂಬಂಧಿಸಿ ಬದಲಾವಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.16 ವಾರಗಳ ವರೆಗಿನ ಅವಧಿ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಈಗ ಕಾದಿರಿಸಲಾಗಿರುವ ದಿನವನ್ನು ರದ್ದು ಮಾಡಲಾಗುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.
ದೇಶದಲ್ಲಿ ಕೊರೊನಾ ಪಾಸಿಟಿವಿಟಿ ಶೇ. 16.98ಕ್ಕೆ ಕುಸಿದಿದೆ. ಶನಿವಾರದಿಂದ ರವಿವಾರದ ಅವಧಿ ಯಲ್ಲಿ 36,18,458ಕ್ಕೆ ಸಕ್ರಿಯ ಸೋಂಕು ಇಳಿಕೆಯಾಗಿದೆ. ಈ ಅವಧಿಯಲ್ಲಿ 3,11,170 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ 4,077 ಮಂದಿ ಅಸುನೀಗಿದಾರೆ. ಸತತ 25 ದಿನಗಳ ಬಳಿಕ ದೇಶದಲ್ಲಿ 24 ತಾಸುಗಳ ಅವಧಿ ಯಲ್ಲಿ ಸೋಂಕು ಕೊಂಚ ಇಳಿ ಮುಖವಾಗಿದೆ.