Advertisement

ಡಿಸೆಂಬರ್‌ ಅಂತ್ಯದೊಳಗೆ 2ನೇ ಡೋಸ್‌ ಶೇ.100 ವಿತರಿಸುವ ಗುರಿ : ಕೂರ್ಮಾ ರಾವ್‌

12:30 PM Oct 08, 2021 | Team Udayavani |

ಉಡುಪಿ : ಈಗ ಉಡುಪಿ ಜಿಲ್ಲೆ ಪ್ರಥಮ ಡೋಸ್‌ ಲಸಿಕೆ ನೀಡುವಲ್ಲಿ ಶೇ.100 ಸಾಧನೆ ಮಾಡಿದೆ. ಇನ್ನು ಎರಡನೆಯ ಡೋಸ್‌ ಲಸಿಕೆಯನ್ನು ಡಿಸೆಂಬರ್‌ ಅಂತ್ಯದೊಳಗೆ ಶೇ.100 ವಿತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಪರಿಷ್ಕೃತ 9,01,568 ಗುರಿಯಲ್ಲಿ 9,08,618 ಜನರಿಗೆ ಮೊದಲ ಡೋಸ್‌ ನೀಡಿದ್ದು ಇವರಲ್ಲಿ ಈಗಾಗಲೇ 4,38,324 (ಶೇ.48.6) ಜನರು ಎರಡನೆಯ ಡೋಸ್‌ ಲಸಿಕೆ ಪಡೆದಿದ್ದಾರೆ. ಮೊದಲ ಡೋಸ್‌ ಸಾಧನೆಗೆ ಆರೋಗ್ಯ ಸಚಿವರು ಮೆಚ್ಚುಗೆ ಸೂಚಿಸಿದ್ದಾರೆಂದು ರಾವ್‌ ತಿಳಿಸಿದರು.

ಪಾಸಿಟಿವಿಟಿ: ಶೇ.1ಕ್ಕಿಂತ ಕಡಿಮೆ
ಅ. 6ರ ವರದಿ ಪ್ರಕಾರ ಸಕ್ರಿಯ ಕೋವಿಡ್‌ ಪ್ರಕರಣಗಳಲ್ಲಿ ಉಡುಪಿ ಜಿಲ್ಲೆ ಎಂಟನೆಯ ಸ್ಥಾನದಲ್ಲಿದೆ. ಪಾಸಿಟಿವಿಟಿ ದರವು ಇಳಿಮುಖವಾಗುತ್ತಿದ್ದು ಕಳೆದ 14 ದಿನಗಳಲ್ಲಿ ಸರಾಸರಿ ಶೇ.1.1, ಏಳು ದಿನಗಳಲ್ಲಿ ಶೇ.0.9ರಷ್ಟಿದೆ. ಪಾಸಿಟಿವಿಟಿ ದರವನ್ನು ಶೂನ್ಯ ಅಂಕಕ್ಕೆ ತರಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದ್ದು ಕಳೆದ ಒಂದು ವಾರದಲ್ಲಿ ದಿನವೂ ಸರಾಸರಿ 3,129ರಂತೆ 21,906 ಕೋವಿಡ್‌ ಶಂಕಿತರ ಪರೀಕ್ಷೆ ಮಾಡಿದೆ ಎಂದರು.
ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರಿಗೆ ಪ್ರಯಾಣ ಆರಂಭಿಸಿದ 72 ಗಂಟೆಯೊಳಗಿನ ನೆಗೆಟಿವ್‌ ವರದಿ ಇದ್ದರೆ ಮಾತ್ರ ಜಿಲ್ಲೆಯನ್ನು ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ. ಹೊಸದಾಗಿ ಪತ್ತೆಯಾದ ಸೋಂಕಿತರನ್ನು ಆಸ್ಪತ್ರೆ ಅಥವಾ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಇರಿಸಿ ಶುಶ್ರೂಷೆ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ : ಊಟ ಮಾಡಿ ಕುಳಿತ್ತಿದ್ದ ಸಹೋದರರ ಮೇಲೆ ಏಕಾಏಕಿ ಬಿದ್ದ ಗೋಡೆ : ಓರ್ವ ಸಾವು, ಇನ್ನೋರ್ವನಿಗೆ ಗಾಯ

ನವರಾತ್ರಿ: 400 ಜನರಿಗೆ ಅವಕಾಶ
ಕೊರೊನಾ ನಿಯಂತ್ರಿಸಲು ಅ. 7ರಿಂದ 15ರ ವರೆಗೆ ನವರಾತ್ರಿ ಆಚರಣೆಯಲ್ಲಿ 400ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರು, ಸಿಬಂದಿ ಸೇರಿದಂತೆ ಎಲ್ಲರೂ ಕೋವಿಡ್‌ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿ.ಪಂ. ಸಿಇಒ ಡಾ|ನವೀನ್‌ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

Advertisement

ಇಂದು 40,000 ಲಸಿಕೆ ಲಭ್ಯ
ಒಂದು ವಾರದಲ್ಲಿ ಲಸಿಕಾ ಮೇಳವನ್ನು ನಡೆಸಿ 1.2 ಲಕ್ಷಕ್ಕೂ ಹೆಚ್ಚು ಡೋಸ್‌ ಲಸಿಕೆ ವಿತರಿಸಲಾಗಿದೆ. ಪ್ರತಿ ಬುಧವಾರ ಮಹಾಮೇಳ ನಡೆಯುತ್ತಿದ್ದು ಈ ಬುಧವಾರ ರಜೆ ಇದ್ದ ಕಾರಣ ಶುಕ್ರವಾರ (ಅ. 8) ನಡೆಸಲಾಗುತ್ತಿದ್ದು ಎರಡನೆಯ ಡೋಸ್‌ ಪಡೆಯಲು ಅರ್ಹತೆ ಇರುವ 40,000 ಜನರಿಗೆ ಲಸಿಕೆ ವಿತರಿಸುವ ಗುರಿ ಇರಿಸಿಕೊಳ್ಳಲಾಗಿದೆ. ಎಲ್ಲಿಯಾದರೂ ಮೊದಲ ಡೋಸ್‌ ಪಡೆಯಲು ತಪ್ಪಿ ಹೋಗಿದ್ದರೆ ಅವರು ಮೊದಲ ಡೋಸ ನ್ನೂ ಪಡೆಯಬಹುದು. ಸಂಭವನೀಯ ಮೂರನೆಯ ಅಲೆಯ ಪರಿಣಾಮ ತಪ್ಪಿಸಲು 18 ವರ್ಷ ಮೇಲ್ಪಟ್ಟ ಎಲ್ಲರೂ ಎರಡೂ ಲಸಿಕೆ ಪಡೆಯಬೇಕು. ಆಶ್ರಮ ವಾಸಿಗಳು, ಹಾಸಿಗೆಯಲ್ಲಿರುವ ವಿಕಲಚೇತನರು, ಹಿರಿಯ ನಾಗರಿಕರಿಗೆ ಆರೋಗ್ಯ ಸಿಬಂದಿಗಳು ಸ್ಥಳಗಳಲ್ಲಿ ಲಸಿಕೆ ನೀಡುತ್ತಿದ್ದಾರೆ. ಆಧಾರ್‌ ಕಾರ್ಡ್‌ ಇಲ್ಲದವರಿಗೂ ಲಸಿಕೆ ನೀಡಲಾಗುತ್ತಿದೆ.
– ಕೂರ್ಮಾ ರಾವ್‌, ಜಿಲ್ಲಾಧಿಕಾರಿಗಳು

ಲಸಿಕೆ ವೇಸ್ಟ್‌ ತಡೆ : ಉಡುಪಿ ಪ್ರಥಮ
ಲಸಿಕೆ ವೇಸ್ಟೇಜ್‌ ಆಗದಂತೆ ನೋಡಿಕೊಳ್ಳುವಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಲಸಿಕೆ ವಯಲ್‌ಗ‌ಳಲ್ಲಿ ಶೇ.50ಕ್ಕಿಂತ ಹೆಚ್ಚು ವಯಲ್‌ಗ‌ಳಲ್ಲಿ ಲಭ್ಯವಿದ್ದ ಹೆಚ್ಚುವರಿ 11ನೇ ಡೋಸ್‌ನ್ನು ವಿತರಿಸಲಾಗಿದೆ. ಇದುವರೆಗೆ ಜಿಲ್ಲೆಗೆ 12,30,700 ಡೋಸ್‌ ಲಸಿಕೆ ಸರಬರಾಜು ಆಗಿದ್ದು ಈಗ 69,640 ಡೋಸ್‌ ಲಸಿಕೆ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|ನಾಗಭೂಷಣ ಉಡುಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next