Advertisement

2ನೇ ಡೋಸ್‌ ವಿಳಂಬದಿಂದ ದೇಹದಲ್ಲಿನ ಪ್ರತಿಕಾಯ ಪ್ರಮಾಣ ಶೇ.300 ಹೆಚ್ಚಳ

08:12 PM May 21, 2021 | Team Udayavani |

ಸಿಂಗಾಪುರ: ಲಸಿಕೆಯ ಮೊದಲ ಡೋಸ್‌ ಪಡೆದ ಬಳಿಕ ಎರಡನೇ ಡೋಸ್‌ ಪಡೆಯಲು ವಿಳಂಬವಾದಷ್ಟೂ ದೇಹದಲ್ಲಿನ ಪ್ರತಿಕಾಯದ ಪ್ರಮಾಣ ಶೇ.300ರಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

Advertisement

ಇದರಿಂದಾಗಿ ಸಿಂಗಾಪುರದಂಥ ಸಣ್ಣ ದೇಶದಲ್ಲಿ ಕೂಡ ಎಲ್ಲರಿಗೂ ಲಸಿಕೆ ನೀಡಲು ಸರ್ಕಾರಕ್ಕೆ ಅನುಕೂಲವಾಗಿದೆ. ಸದ್ಯ ಸಿಂಗಾಪುರದಲ್ಲಿ ಮೂರರಿಂದ ನಾಲ್ಕು ವಾರಗಳ ಬಳಿಕ 2ನೇ ಡೋಸ್‌ ನೀಡಲಾಗುತ್ತದೆ. ಅದನ್ನು ಆರರಿಂದ ಎಂಟು ವಾರಗಳಿಗೆ ವಿಸ್ತರಿಸುವ ಉದ್ದೇಶ ಅಲ್ಲಿನ ಸರ್ಕಾರಕ್ಕೆ ಇದೆ.

ಭಾರತದಲ್ಲಿ ಈಗಾಗಲೇ ಕೊವಿಶೀಲ್ಡ್‌ ಲಸಿಕೆ ಪಡೆಯುವವರಿಗೆ 12-16 ವಾರಗಳ ಕಾಲ ವಿಸ್ತರಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಜನರಿಗೆ ಲಸಿಕೆ ನೀಡಲು ಅನುಕೂಲವಾಗುತ್ತದೆ.

ಇದನ್ನೂ ಓದಿ :ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್‌ ವ್ಯವಸ್ಥೆ ಸಮರ್ಪಕಗೊಳಿಸಿ

Advertisement

Udayavani is now on Telegram. Click here to join our channel and stay updated with the latest news.

Next