Advertisement

ಕೋವಿಡ್ 19 ಸೋಂಕಿಗೆ ಪುತ್ತೂರಿನಲ್ಲಿ ಎರಡನೇ ಬಲಿ; 4 ಪಾಸಿಟಿವ್‌

01:29 AM Jul 13, 2020 | Hari Prasad |

ಪುತ್ತೂರು: ಕೋವಿಡ್ 19 ಸೋಂಕು ಬಾಧಿತ ಮಾಟ್ನೂರು ಗ್ರಾಮದ ಮೂಲಡ್ಕದ 50 ವರ್ಷ ಪ್ರಾಯದ ವ್ಯಕ್ತಿ ರವಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Advertisement

ಇದು ತಾಲೂಕಿನಲ್ಲಿ ಕೋವಿಡ್ 19 ಸೋಂಕಿಗೆ ಬಲಿಯಾಗಿರುವ ಎರಡನೇ ಪ್ರಕರಣ.

ಇದೇ ವೇಳೆ ತಾಲೂಕಿನಲ್ಲಿ ರವಿವಾರ 4 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ.

ನ್ಯುಮೋನಿಯಾ ಹಿನ್ನೆಲೆಯಲ್ಲಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜು. 10ರಂದು ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಮಾಟ್ನೂರಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ತಾ| ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ನಾಲ್ವರಿಗೆ ಸೋಂಕು
ವಿದೇಶದಿಂದ ಬಂದು ಮಂಗಳೂರಿನ ಹೊಟೇಲಲ್ಲಿ ಕ್ವಾರಂಟೈನ್‌ ಆಗಿರುವ ಇಚಿಲಂಪಾಡಿಯ 27 ವರ್ಷದ ಯುವಕ, ಮರೀಲು ಕ್ಯಾಂಪ್ಕೋ ವಸತಿ ಗೃಹದ ನಿವಾಸಿ 35 ವರ್ಷದ ಗೃಹಿಣಿ, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಆಗಿರುವ ಬಲ್ಯ ಹೊಸ್ಮಠದ 22 ವರ್ಷದ ಯುವತಿ ಮತ್ತು ಶಾಂತಿಗೋಡು ನಿವಾಸಿ 15 ವರ್ಷದ ಬಾಲಕಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇಚಿಲಂಪಾಡಿಯ ಯುವಕನನ್ನು ಮಂಗಳೂರಿನ ಆಸ್ಪತ್ರೆಗೆ, ಇತರ ಮೂವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಬಂಟ್ವಾಳ: 16 ಪಾಸಿಟಿವ್‌ ಪ್ರಕರಣ
ಬಂಟ್ವಾಳ ತಾಲೂಕಿನಲ್ಲಿ ರವಿವಾರ ಒಟ್ಟು 16 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಬಿ.ಸಿ.ರೋಡ್‌ನ‌ 43, 32 ವರ್ಷದ ಮಹಿಳೆ ಹಾಗೂ 26 ವರ್ಷದ ಪುರುಷ, ಬಿ.ಮೂಡದ 70 ವರ್ಷದ ಪುರುಷ, ಬಂಟ್ವಾಳದ 28 ವರ್ಷದ ಪುರುಷ, ನಂದಾವರದ 26 ವರ್ಷದ ಪುರುಷ ಹಾಗೂ 19 ವರ್ಷದ ಮಹಿಳೆ, ಕಲ್ಲರ್ಪೆಯ 56 ವರ್ಷದ ಪುರುಷ, ಪೆರಾಜೆ ಬುಡೋಳಿಯ 30 ವರ್ಷದ ಮಹಿಳೆ, ಕಲ್ಲಡ್ಕದ 22 ವರ್ಷದ ಮಹಿಳೆ, ಪೆರ್ನೆಯ 20 ವರ್ಷದ ಮಹಿಳೆ, ನೇರಳ ಕಟ್ಟೆಯ 25 ವರ್ಷದ ಮಹಿಳೆ, ಬೆಂಜನಪದವಿನ 38 ವರ್ಷದ ಮಹಿಳೆ, ಲೊರೆಟ್ಟೊಪದವಿನ 29 ವರ್ಷದ ಪುರುಷ, ಅರ್ಕುಳದ 37 ವರ್ಷದ ಮಹಿಳೆ ಹಾಗೂ ಫರಂಗಿಪೇಟೆಯ 18 ವರ್ಷದ ಪುರುಷನಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next