Advertisement

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

06:07 PM Dec 20, 2024 | Team Udayavani |

ಅಲಿಗಢ (ಉತ್ತರಪ್ರದೇಶ): ಅಲಿಘರ್‌ನ ದೆಹಲಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಸರೈ ಮಿಯಾನ್‌ನಲ್ಲಿ ಮತ್ತೊಂದು ಶಿವ ದೇವಾಲಯವನ್ನು ಪತ್ತೆ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳ ಮುಖಂಡರು ಘೋಷಿಸಿದ್ದಾರೆ.

Advertisement

ಬನ್ನಾದೇವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವಮುಸ್ಲಿಂ ಪ್ರಾಬಲ್ಯದ ಪ್ರದೇಶವಾದ ಸರಾಯ್ ರೆಹಮಾನ್ ಪ್ರದೇಶದಲ್ಲಿ ಇದೇ ರೀತಿಯ ಪಾಳುಬಿದ್ದ ದೇವಾಲಯವು ಕಂಡುಬಂದು, ಪುನರುಜ್ಜೀವನಗೊಂಡ ಕೇವಲ 36 ಗಂಟೆಗಳ ನಂತರ ಗುರುವಾರ ಸಂಜೆ(ಡಿಸೆಂಬರ್ 19) ಈ ದೇವಾಲಯ ಪತ್ತೆಯಾಗಿದೆ.

ಸ್ಥಳಕ್ಕಾಗಮಿಸಿದ ಬಿಜೆಪಿ ಮುಖಂಡರು, ಬಜರಂಗದಳದ ಮುಖಂಡರು ಮಾತನಾಡಿ, ಬೀಗ ಹಾಕಿರುವ ದೇವಸ್ಥಾನದ ಆವರಣ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಿಗ್ರಹಗಳ ಮೇಲೆ ಅವಶೇಷಗಳು ಹರಡಿಕೊಂಡಿವೆ ಎಂದು ಹೇಳಿದ್ದಾರೆ.

ಪೊಲೀಸರ ಸಮ್ಮುಖದಲ್ಲಿ ಗೇಟಿನ ಬೀಗಗಳನ್ನು ಒಡೆದು ದೇವಸ್ಥಾನವನ್ನು ಸ್ವಚ್ಛಗೊಳಿಸಿ ಧಾರ್ಮಿಕ ಘೋಷಣೆಗಳ ನಡುವೆ ಶುದ್ಧೀಕರಿಸಗಿದೆ.

ದೇವಾಲಯಗಳನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲು ಮತ್ತು ಶಾಂತಿಯುತವಾಗಿ ಪೂಜೆಯನ್ನು ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಈ ಪ್ರದೇಶಗಳಲ್ಲಿ ಶಾಂತಿ ಸಮಿತಿಗಳ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಡರಾತ್ರಿ ಸುದ್ದಿಗಾರರಿಗೆ ತಿಳಿಸಿದರು.

Advertisement

ಇಲ್ಲಿಯವರೆಗೆ, ಮೇಲಿನ ಎರಡು ಪ್ರದೇಶಗಳಲ್ಲಿ ಯಾವುದೇ  ಅಹಿತಕರ ಘಟನೆಯ ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next