Advertisement

Rain: ಸೆ. 25ರಿಂದ ಕಡಿಮೆಯಾಗಲಿದೆ ಮಳೆ

12:52 AM Sep 23, 2023 | Team Udayavani |

ಹೊಸದಿಲ್ಲಿ: ಕರ್ನಾಟಕದಲ್ಲಿ ಪ್ರಸಕ್ತ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರು ವಂತೆಯೇ ಸೆ.25ರಿಂದ ಮಳೆ ನಿಧಾನವಾಗಿ ಕಡಿಮೆಯಾಗಲಿದೆ. ಅ.15ರ ಒಳಗಾಗಿ ಹಾಲಿ ಹಂಗಾಮಿನ ಮುಗಾರು ಅವಧಿ ಮುಕ್ತಾಯವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.

Advertisement

ವಾಯವ್ಯ ಮತ್ತು ಪಶ್ಚಿಮ – ಮಧ್ಯ ಭಾರತದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಮುಂದಿನ 5 ದಿನಗಳವರೆಗೂ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಪಶ್ಚಿಮ ಭಾಗದಿಂದ ಅಂದರೆ ರಾಜಸ್ಥಾನದ ಭಾಗದಿಂದ ಸೆ.25ರ ವೇಳೆಗೆ ಮಳೆ ನಿಧಾನಕ್ಕೆ ಕಡಿಮೆಯಾಗುತ್ತಾ ಬರಲಿದೆ ಎಂದು ಐಎಂಡಿ ತಿಳಿಸಿದೆ. ಸಾಮಾನ್ಯವಾಗಿ ಮುಂಗಾರು ಮಳೆ ನಿಧಾನಕ್ಕೆ ಕಡಿಮೆಯಾಗುವುದು ಎಂದರೆ ದೀರ್ಘಾವಧಿಗೆ ಮಳೆ ಸುರಿಯುತ್ತಲೇ ಇರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾದರೆ ದೇಶದ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next