Advertisement

Krishna Byre Gowda ಸೆ. 2ರಿಂದ ಪೋಡಿ ದುರಸ್ತಿ: 10 ಲಕ್ಷ ರೈತರಿಗೆ ಅನುಕೂಲ ನಿರೀಕ್ಷೆ

01:55 AM Aug 31, 2024 | Team Udayavani |

ಬೆಂಗಳೂರು: ರಾಜ್ಯದ ಸುಮಾರು 10 ಲಕ್ಷಕ್ಕೂ ಹೆಚ್ಚು ರೈತ ರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರಕಾರವು ಸೆ. 2ರಿಂದ “ಪೋಡಿ ದುರಸ್ತಿ’ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ನಡೆಸಲಿದೆ.

Advertisement

ಈ ಸಂಬಂಧ ಡಿ.ಸಿ.ಗಳು, ತಹಶೀಲ್ದಾರರ ಸಹಿತ ಇಲಾಖೆಯ ಎಲ್ಲ ಅಧಿಕಾರಿಗಳ ಜತೆಗೆ ವೀಡಿಯೋ ಕಾನ್ಫರೆನ್ಸ್‌ ಸಭೆ ನಡೆಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಈ ಅಭಿಯಾನದಿಂದ 10 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ. ಲಕ್ಷಾಂತರ ರೈತರು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೆಲವರಿಗೆ ಮಾತ್ರ ಪೋಡಿ ದುರಸ್ತಿಯಾಗಿದೆ.

ಈ ಅಭಿಯಾನದ ಮೂಲಕ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸೂಚಿಸಿದರು.

ಈ ಹಿಂದೆ ಪೋಡಿ ದುರಸ್ತಿ ಮಾಡಲು ಅವಶ್ಯವಿರುವ 1 5 ನಮೂನೆಗಳನ್ನು ತಯಾರಿಸಲು ಕಾಗದದ ಕಡತಗಳನ್ನು ತಯಾರಿಸಲು ಪ್ರಯತ್ನಿಸಲಾಗಿತ್ತು. ಆದರೆ ಆ ಕೆಲಸವೂ ಸಮರ್ಪಕವಾಗಿ ಆಗಿಲ್ಲ. ಕೆಲವು ಕಡತಗಳು ಕಾಣೆಯಾಗಿವೆ ಅಥವಾ ಕೈಗೆ ಸಿಗುವುದಿಲ್ಲ. ಇದರಿಂದ ಕಡತಗಳು ಇದ್ದರೂ ಅನೇಕರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಹೀಗಾಗಿ ಗಣಕೀಕರಿಸಿದ 1 5 ಕಡತಗಳನ್ನು ತಯಾರಿಸುವ ಪ್ರಯತ್ನ ಆರಂಭಿಸಲಾಗಿದೆ ಎಂದರು.

1-5 (ನಮೂನೆ) ಕಡತ ಎಲ್ಲ ಸರಕಾರಿ ಜಮೀನಿಗೆ (ರೈತರಿಗೆ ಮಂಜೂರಾಗಿರುವ), ರೈತರ ಅರ್ಜಿಗೆ ಕಾಯದೆ ಕಂದಾಯ ಇಲಾಖೆ ಸ್ವಯಂ ಕಡತಗಳನ್ನು ತಯಾರಿಸಲಿದೆ. ಮುಂದೆ 6 10 ಮಾಡಿ ಅವರಿಗೆ ಸರ್ವೇಯೊಂದಿಗೆ ದುರಸ್ತಿ ಮಾಡಿದ ಅನಂತರ ಹೊಸ ಸರ್ವೇ ನಂಬರ್‌ ಪಹಣಿಯೊಂದಿಗೆ ಸಂಪೂರ್ಣ ದಾಖಲೆ ಮಾಡಿಕೊಡಲಾಗುವುದು ಎಂದರು.

Advertisement

ಅಧಿಕಾರಿಗಳು ಕಥೆ ಹೇಳುವಂತಿಲ್ಲ: ಸಚಿವ
ಡಿಜಿಟಲಾಗಿ 1 5 (ನಮೂನೆ) ಪೋಡಿ ದುರಸ್ತಿ ಕಾರ್ಯವನ್ನು ರಾಜ್ಯಾದ್ಯಂತ ವಿಸ್ತರಿಸುವ ಮುನ್ನ ಈ ಯೋಜನೆಯನ್ನು ಹಾಸನ
ದಲ್ಲಿ ಪ್ರಾಯೋಗಿಕವಾಗಿ ನಡೆಸಲಾಗಿದೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿ ರುವುದನ್ನು ಖಚಿತಪಡಿಸಿಕೊಂಡ ಅನಂತರವೇ ಇದೀಗ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಪೋಡಿ ದುರಸ್ತಿ ಬಗ್ಗೆ ಇನ್ನೂ ಕಥೆ ಹೇಳುವ ಅಗತ್ಯವಿಲ್ಲ ಎಂದು ಕಂದಾಯ ಸಚಿವರು ಹೇಳಿದರು.

ಆ್ಯಪ್‌ ಮೂಲಕ ಕಡತ ಪತ್ತೆ ಸಾಧ್ಯ!
ಪೋಡಿ ದುರಸ್ತಿಗಾಗಿ ಆರಂಭಿಸಿರುವ ಆ್ಯಪ್‌ ಮೂಲಕ ಯಾವ ಕಡತ ಯಾವ ಅಧಿಕಾರಿಯ ಬಳಿ ಎಷ್ಟು ದಿನಗಳಿಂದ ಬಾಕಿ ಇದೆ ಎಂಬ ಮಾಹಿತಿಯನ್ನೂ ಪತ್ತೆಹಚ್ಚಬಹುದು. ಹೀಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಕೃಷ್ಣಬೈರೇಗೌಡ ಎಚ್ಚರಿಸಿದರು. ನಿಮ್ಮ ತಾಲೂಕಿನಲ್ಲಿ ದರ್ಖಾಸ್ತು ಪೋಡಿ ಆಗಬೇಕಿರುವ ಸರ್ವೇ ನಂಬರ್‌ ಎಷ್ಟಿದೆ ಎಂದು ಮೊದಲು ಪಟ್ಟಿ ಮಾಡಿ, ಮುಖ್ಯವಾಗಿ ಜಿಲ್ಲಾ ಧಿಕಾರಿಗಳು ಪ್ರತೀ ವಾರ ಗ್ರಾಮ ಆಡಳಿತ ಅಧಿಕಾರಿಯಿಂದ ತಹಶೀಲ್ದಾರ್‌ವರೆಗೆ ಎಲ್ಲ ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆ ನೀಡಬೇಕು ಎಂದಿದ್ದಾರೆ.

ಏನಿದು ಪೋಡಿ ದುರಸ್ತಿ?
-ಯಾವುದೇ ವ್ಯಕ್ತಿಯ ಹೆಸರಿನಲ್ಲಿರುವಜಾಗ ಎಲ್ಲಿದೆ, ಎಲ್ಲಿಯ ವರೆಗಿದೆ ಎನ್ನುವು ದನ್ನು ಖಚಿತಪಡಿಸುವುದೇ ಪೋಡಿ
-ಈ ಜಾಗದ ಮಾಹಿತಿಯಲ್ಲಿ ತಕರಾರು ಇದ್ದರೆ, ಅನ್ಯ ಸಮಸ್ಯೆಗಳಿದ್ದರೆ ಅದನ್ನು ಸರಿ ಪಡಿಸಿಕೊಡುವುದೇ ಪೋಡಿ ದುರಸ್ತಿ
-ದುರಸ್ತಿಗೆ 1ರಿಂದ 5 ನಮೂನೆಯ ಕಡತಗಳು ಅಗತ್ಯ. ಇವನ್ನು ಬಳಸಿ ಅಧಿಕಾರಿಗಳು ಪೋಡಿ ದುರಸ್ತಿ ನಡೆಸುತ್ತಾರೆ

 

Advertisement

Udayavani is now on Telegram. Click here to join our channel and stay updated with the latest news.