Advertisement
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ 67ನೇ ವರ್ಷದ ದಸರಾ ನಾಡಹಬ್ಬ ನಡೆಯುತ್ತಿದೆ. ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಶ್ರಯದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ಸೆ. 29ರ ಸಂಜೆ ಪುತ್ತೂರು ಹಿರಿಯ ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ವಾಟೆಡ್ಕ ಕೃಷ್ಣಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಭಾಗವಹಿಸುವರು ಎಂದರು.
Related Articles
Advertisement
ದಸರಾ ನಾಡಹಬ್ಬ ಸಮಿತಿ ಗೌರವಾಧ್ಯಕ್ಷ ಎನ್.ಕೆ. ಜಗನ್ನಿವಾಸ್ ರಾವ್, ಕಾರ್ಯ ದರ್ಶಿ ಎಂ.ಟಿ. ಜಯರಾಮ ಭಟ್, ಕೋಶಾಧಿಕಾರಿ ರಮೇಶ್ ಬಾಬು ಉಪಸ್ಥಿತರಿದ್ದರು.
ಡಾ| ಶಿವರಾಮ ಕಾರಂತ ಆರಂಭಿಸಿದ್ದ ಹೆಗ್ಗಳಿಕೆಮತ್ತೆ ಆರಂಭವಾಗಿತ್ತು ಪುತ್ತೂರಿನಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕೃಷಿ ನಡೆಸಿದ್ದ ಡಾ|ಕೆ.ಶಿವರಾಮ ಕಾರಂತ, 1931ರಲ್ಲಿ ನೆಲ್ಲಿಕಟ್ಟೆಯಲ್ಲಿ ನಾಡಹಬ್ಬವನ್ನು ಆರಂಭಿಸಿದ್ದರು. ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರೋತ್ಸಾಹದ ಉದ್ದೇಶದಿಂದ ನಾಡಹಬ್ಬ ಆಚರಣೆ ನಡೆಸುತ್ತಿದ್ದರು. ಅನಂತರದಲ್ಲಿ ಕೆಲವು ವರ್ಷ ಈ ಆಚರಣೆ ನಿಂತು 1952-53ರಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತೇಸರ ಸದಾಶಿವ ರಾಯರ ನೇತೃತ್ವದಲ್ಲಿ ಮರು ಆರಂಭಿಸಲಾಗಿತ್ತು. ಅನಂತರ ನಾಡಹಬ್ಬ ದೇವಾಲಯದ ಬಳಿಗೆ ಸ್ಥಳಾಂತರಗೊಂಡಿತ್ತು.