Advertisement

ಮಹಾಕಾಲ್ ಎಕ್ಸ್ ಪ್ರೆಸ್ ರೈಲಿನ ಬಿ5 ಕೋಚ್ ನ 64ನೇ ನಂಬರ್ ಸೀಟು ಈಶ್ವರನಿಗೆ ಮೀಸಲು!

09:45 AM Feb 18, 2020 | Nagendra Trasi |

ವಾರಾಣಸಿ:ಉತ್ತರಪ್ರದೇಶದ ವಾರಾಣಸಿ ಮತ್ತು ಮಧ್ಯಪ್ರದೇಶ ಸೇರಿದಂತೆ ಎರಡು ರಾಜ್ಯಗಳ ಮೂರು ಜ್ಯೋತಿರ್ಲಿಂಗ ತಾಣವನ್ನು ಸಂಪರ್ಕಿಸುವ ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದು, ಇದರಲ್ಲಿ ಬಿ5 ಕೋಚ್ ನ 64ನೇ ನಂಬರ್ ನ ಸೀಟನ್ನು ಈಶ್ವರನಿಗೆ ಮೀಸಲಿಡಲಾಗಿದೆ!

Advertisement

ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ರೈಲು ಇಂದೋರ್ ಸಮೀಪದ ಓಂಕಾರೇಶ್ವರ್, ಉಜ್ಜೈನ್ ನ ಮಹಾಕಾಲೇಶ್ವರ್ ಮತ್ತು ವಾರಾಣಸಿಯ ಕಾಶಿ ವಿಶ್ವನಾಥನ ಜ್ಯೋತಿರ್ಲಿಂಗ ತಾಣವನ್ನು ಸಂಪರ್ಕಿಸಲಿದೆ ಎಂದು ವರದಿ ತಿಳಿಸಿದೆ.

ಫೆ.20ರಿಂದ ಮಹಾಕಾಲ್ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ. ಕೋಚ್ ಬಿ5ರಲ್ಲಿನ ಸೀಟ್ ನಂಬರ್ 64ರಲ್ಲಿ ಈಶ್ವರನ ಫೋಟೋ ಇಡಲಾಗಿದೆ. ಈ ಸೀಟನ್ನು ಈಶ್ವರನಿಗೆ ಮೀಸಲಿಡುವ ಮೂಲಕ ಮುಂದಿನ ದಿನಗಳಲ್ಲಿ ಜನರಲ್ಲಿ ಸೀಟಿನ ಕುರಿತು ಅರಿವು ಮೂಡಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next