Advertisement

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

09:40 PM Apr 23, 2024 | Team Udayavani |

ನವದೆಹಲಿ: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಕನಿಷ್ಠ ಒಬ್ಬ ಪೋಷಕರ ಪಕ್ಕದಲ್ಲಿ ಆಸನ ವ್ಯವಸ್ಥೆ ನಿಗದಿಪಡಿಸುವುದನ್ನು ಏರ್‌ಲೈನ್ಸ್‌ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ನಿರ್ದೇಶಿಸಿದೆ.

Advertisement

ವಿಮಾನ ಪ್ರಯಾಣ ವೇಳೆ ಚಿಕ್ಕ ಮಕ್ಕಳಿಗೆ ತಮ್ಮ ಪೋಷಕರೊಂದಿಗೆ ಕುಳಿತುಕೊಳ್ಳಲು ಅವಕಾಶ ಸಿಗದ ಅನೇಕ ನಿದರ್ಶನಗಳ ಹಿನ್ನೆಲೆಯಲ್ಲಿ ಡಿಜಿಸಿಎ ಈ ಸೂಚನೆ ನೀಡಿದೆ.

ಒಂದೇ ಪಿಎನ್‌ಆರ್‌ನಲ್ಲಿ ವಿಮಾನ ಪ್ರಯಾಣ ಟಿಕೆಟ್‌ ಬುಕ್‌ ಮಾಡಿದ ಕುಟುಂಬಕ್ಕೆ, ತಂದೆ ಅಥವಾ ತಾಯಿ ಪಕ್ಕ 12 ವರ್ಷದೊಳಗಿನ ಮಕ್ಕಳಿಗೆ ಆಸನ ವ್ಯವಸ್ಥೆ ಮಾಡಬೇಕು. ಪರಿಷ್ಕೃತ ನಿಯಮಗಳ ಪ್ರಕಾರ, ಬ್ಯಾಗೇಜ್‌, ಆದ್ಯತೆಯ ಆಸನ, ಊಟ, ತಿಂಡಿ, ಪಾನೀಯ ಶುಲ್ಕಗಳು ಮತ್ತು ಶುಲ್ಕದೊಂದಿಗೆ ಸಂಗೀತ ವಾದ್ಯಗಳನ್ನು ಕೊಂಡೊಯ್ಯಲು ಅವಕಾಶವಿದೆ ಎಂದು ಡಿಜಿಸಿಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next