Advertisement

ಲಂಡನ್‌ನಲ್ಲಿ ಭಾರತೀಯಳ ಸೀಟ್‌ ಬೆಲ್ಟ್ ಅಭಿಯಾನ

03:50 AM Mar 14, 2017 | Team Udayavani |

ಲಂಡನ್‌: ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ಭಾರತ ಮೂಲದ ತಾಯಿಯೊಬ್ಬರು, ಲಂಡನ್‌ನಲ್ಲಿ ಸೀಟ್‌ಬೆಲ್ಟ್ ಅಭಿಯಾನ ಆರಂಭಿಸಿದ್ದಾರೆ.

Advertisement

ಲಂಡನ್‌ ನಿವಾಸಿಯಾಗಿರುವ ಭಾರತ ಮೂಲದ ಸುಖೀ ಅತ್ವಾಲ್‌ 2 ವರ್ಷಗಳ ಹಿಂದೆ ಬ್ರಿಟನ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ತಮ್ಮ 12 ವರ್ಷದ ಮಗ ಅಮರ್‌ನನ್ನು ಕಳೆದುಕೊಂಡಿದ್ದರು. ವೇಗವಾಗಿ ಬಂದ ಟ್ಯಾಕ್ಸಿಯೊಂದು ಸುಖೀ ಅತ್ವಾಲ್‌ ಹಾಗೂ ಅಮರ್‌ ಇದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಅಮರ್‌, ಕೆಲ ದಿನಗಳ ನಂತರ ಆಸ್ಪತ್ರೆಯಲ್ಲಿ ಅಸುನೀಗಿದ್ದ.

2015ರಲ್ಲಿ ನಡೆದ ಈ ಅಪಘಾತದ ಸಿಸಿ ಟಿವಿ ಫ‌ೂಟೇಜ್‌ ಅನ್ನು ಬಿಡುಗಡೆ ಮಾಡಿರುವ ಸುಖೀ, “”ಅಮರ್‌ ಒಬ್ಬ ಬುದ್ಧಿವಂತ ಬಾಲಕ. ನಗು ಸದಾ ಆತನ ಮುಖವನ್ನು ಅಲಂಕರಿಸಿರುತ್ತಿತ್ತು. ಅಪಘಾತ ನಡೆದಾಗ ಅಮರ್‌ ಸೀಟ್‌ ಬೆಲ್ಟ್ ಧರಿಸಿದ್ದರೆ ಖಂಡಿತ ಇಂದು ನಮ್ಮೊಂದಿಗೆ ಇರುತ್ತಿದ್ದ,” ಎಂದು ಹೇಳಿದ್ದು, “”ಕಾರಿನಲ್ಲಿ ಪ್ರಯಾಣಿಸುವಾಗ ದಯವಿಟ್ಟು ಎಲ್ಲರೂ ಸೀಟ್‌ ಬೆಲ್ಟ್ ಧರಿಸಿ, ಸುರಕ್ಷಿತವಾಗಿರಿ” ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next