Advertisement
ಮಂಗಳನಲ್ಲೂ ಜೀವಿಗಳಿವೆಯೇ ಎಂಬ ಅಧ್ಯಯನಕ್ಕಾಗಿ ಈ ಯಾನ ಕೈಗೊಳ್ಳಲಾಗಿದೆ. ಅಲ್ಲಿಂದ ಕೆಲವು ಮಾದರಿಗಳನ್ನು ಅದು ಭೂಮಿಗೆ ತರಲಿದೆ. ಅಲ್ಲಿರುವ ಪ್ರಾಚೀನ ಸರೋವರದ ದಂಡೆ ಮತ್ತು ನದಿ ಮುಖಜ ಭೂಮಿಯ ಶಿಲೆ, ಅವಶೇಷಗಳನ್ನು ಶೋಧಿಸಲಿದೆ. ಭೂಗರ್ಭ ಶಾಸ್ತ್ರ, ಮಂಗಳನ ಹಿಂದಿನ ಹವಾಮಾನದ ಬಗ್ಗೆಯೂ ಅಧ್ಯಯನ ನಡೆಸಲಿದೆ.
Related Articles
Advertisement
ಮಂಗಳನ ಮೇಲಿಳಿದ ರೋವರ್‌ಗಳ ಪೈಕಿ ಇದು 5ನೆಯದು. ಎಲ್ಲವೂ ಅಮೆರಿಕದವು. ಇತ್ತೀಚೆಗಷ್ಟೇ ಚೀನದ ಉಪಗ್ರಹವೊಂದು ಮಂಗಳನ ಪರಿಧಿಯೊಳಗೆ ಪ್ರವೇಶಿಸಿದ್ದು, ಸದ್ಯದಲ್ಲೇ ಅಲ್ಲಿ ಇಳಿಯಬಹುದು!
ಸ್ವಾತಿ ಕೈಯಲ್ಲಿ ಯಾನದ ಸೂತ್ರ :
ಪರ್ಸಿವಿಯರೆನ್ಸ್ ಮಂಗಳನ ಅಂಗಳ ಮುಟ್ಟುವಲ್ಲಿ ಬೆಂಗಳೂರು ಮೂಲದ ಸ್ವಾತಿ ಮೋಹನ್ ಅವರ ಶ್ರಮ ಅಪಾರ. ಅದು ಮಂಗಳ ನಲ್ಲಿ ಇಳಿಯುತ್ತಿದ್ದಂತೆ ನಾಸಾದ ಕೇಂದ್ರ ಕಚೇರಿಯಲ್ಲಿ “ಟಚ್‌ಡೌನ್ ಕನ್‌ಫಮ್ಡ್ì’ ಎಂದು ಘೋಷಿಸಿದ್ದು ಇವರು. 7 ತಿಂಗಳ ಕಾಲ ಭೂಮಿಯಿಂದಲೇ ಸೂತ್ರ ಹಿಡಿದು ಮಾರ್ಗ ದರ್ಶನ, ನೇವಿಗೇಶನ್ ಮತ್ತು ನಿಯಂತ್ರಣದ ಜವಾಬ್ದಾರಿ ವಹಿಸಿದ್ದರು.
ಹೇಗಿದೆ ರೋವರ್? :
- ಎಸ್‌ಯುವಿಯಷ್ಟು ಗಾತ್ರ
- 7 ಅಡಿ ಉದ್ದದ ರೋಬ್ಯಾಟಿಕ್ ಕೈ
- 19 ಕೆಮರಾಗಳು
- 2 ಮೈಕ್ರೋಫೋನ್‌ಗಳು
- ಕಲ್ಲು ಕತ್ತರಿಸುವ ಉಪಕರಣಗಳು