Advertisement

ಮತ್ತಿಹಳ್ಳಿಯಲ್ಲಿ ಎರಡು ಓಣಿ ಸೀಲ್‌ಡೌನ್‌

09:25 AM Jun 24, 2020 | Suhan S |

ಹರಪನಹಳ್ಳಿ: ಜಿಂದಾಲ್‌ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ಮತ್ತಿಹಳ್ಳಿ ಗ್ರಾಮದ ಸಿಬ್ಬಂದಿಯೊಬ್ಬರಿಗೆ ಕೋವಿಡ್ ಪಾಸಿಟವ್‌ ಬಂದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಎರಡು ಓಣಿಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

ಜಿಂದಾಲ್‌ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಕೂಡ್ಲಿಗಿ ತಾಲೂಕಿನ ಗಜಾಪುರ ಶಾಲೆಯ ಕ್ವಾರಂಟೈನ್‌ ಕೇಂದ್ರದಲ್ಲಿ ಇಡಲಾಗಿತ್ತು. ಆದರೆ ಮತ್ತಿಹಳ್ಳಿ ಗ್ರಾಮದ ವ್ಯಕ್ತಿ ಪರೀಕ್ಷಾ ವರದಿ ಬರುವ ಮೊದಲೇ ಭಾನುವಾರ ಸ್ವಗ್ರಾಮ ಆಗಮಿಸಿದ್ದರು. ಸೋಮವಾರ ಸಂಜೆ ವೇಳೆಗೆ ಆತನ ವರದಿ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಆತನನ್ನು ರಾತ್ರೋರಾತ್ರಿ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ಜಿಂದಾಲ್‌ ಕೋವಿದ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿತನ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಒಟ್ಟು 14 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಅಲ್ಲದೇ ಗ್ರಾಮದಲ್ಲಿ ಆತನು ಸುತ್ತಾಡಿ ಎರಡು ಓಣಿಗಳನ್ನು ಗ್ರಾಪಂ ನೆರವಿನೊಂದಿಗೆ ಸೀಲ್‌ಡೌನ್‌ ಮಾಡಲಾಗಿದೆ. ಮತ್ತಿಹಳ್ಳಿ ಗ್ರಾಪಂ ಅಧ್ಯಕ್ಷೆ ಪಿ.ಚನ್ನಮ್ಮರಾಮಣ್ಣ, ತಾ.ಪಂ ನರೇಗಾ ಯೋಜನಾಧಿಕಾರಿ ತಿಮ್ಮ ನಾಯ್ಕ, ಗ್ರಾ.ಪಂ ಕಾರ್ಯದರ್ಶಿ ಅಂಬಣ್ಣ, ಎಎಸ್‌ಐ ರತನ್‌ಸಿಂಗ್‌, ದೇವೇಂದ್ರಪ್ಪ, ಮೈದೂರು ರಾಮಪ್ಪ, ನಾಗಪ್ರಕಾಶ, ಕುಮಾರ್‌, ಚಿಗಟೇರಿ ವೃತ್ತ ನಿರೀಕ್ಷಕ ಬಸವರಾಜ್‌, ವಿ.ಎ. ವಿಜಯ್‌ಕುಮಾರ್‌, ಆರೋಗ್ಯ ಇಲಾಖೆ ಸಂತೋಷ, ಕೆಂಚಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next