Advertisement

ಗೋಲಗುಮ್ಮಟದಿಂದ ಬಡಿಕಮಾನ್ ವರೆಗೆ ಸಂಪೂರ್ಣ ಸೀಲ್ ಡೌನ್

09:25 AM Apr 13, 2020 | keerthan |

ವಿಜಯಪುರ: ನಗರದಲ್ಲಿ ಕೋವಿಡ್-19 ಸೋಂಕು ಶಂಕಿತರು ಕಂಡು ಬಂದಿರುವ ಹಿನ್ನೆಲೆಯಲ್ಲಿ ಬಡಿಕಮಾನ್ ದಿಂದ ಗೋಲಗುಮ್ಮಟ ದವರೆಗೆ ಇಡೀ ಪ್ರದೇಶವನ್ನು ಸೀಲ್ ಡೌನ್ ಮಾಡಿದ್ದು, ಛಪ್ಪರಬಂದ್ ಗಲ್ಲಿ ಸೇರಿ ಈ ಪ್ರದೇಶದ ಎಲ್ಲ ಗಲ್ಲಿಗಳ ರಸ್ತೆಗಳನ್ನು ಸಂಪೂರ್ಣ  ಬಂದ್ ಮಾಡಲಾಗಿದೆ. ಹೀಗಾಗಿ ಜನರು ಜಿಲ್ಲಾಡಳಿತದ ಜೊತೆ ಸಹಕರಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.

Advertisement

ಶನಿವಾರ ಸಂಜೆಯಿಂದ ನಗರದಲ್ಲಿ ಬೀಡುಬಿಟ್ಟಿರುವ ಅವರು, ಜಿಲ್ಲಾಡಳಿತ ಅಧಿಕಾರಿಗಳಿಂದ ಜಿಲ್ಲೆಯ ಕೋವಿಡ್-19 ಕೊರೊನಾ ರೋಗದ ಕುರಿತು ಮಾಹಿತಿ ಪಡೆದ ಬಳಿಕ ‌ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು,

ಲಾಕ್ ಡೌನ್ ಹಾಗೂ ಸೀಲ್ ಡೌನ್ ಇರುವ ಪ್ರದೇಶದ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಅದರಲ್ಲೂ ಸೀಲ್ ಡೌನ್ ಇರುವ ಪ್ರದೇಶಕ್ಕೆ ಹೊರಗಿನ ಯಾರಿಗೂ ಪ್ರವೇಶವಿಲ್ಲ, ಈ ಪ್ರದೇಶದ ಜನರೂ ಹೊರಗಡೆ ಕಾಣಿಸಿಕೊಳ್ಳುವಂತೆ ಇಲ್ಲ. ಜಿಲ್ಲಾಡಳಿತದ ಈ ಕಟ್ಟುನಿಟ್ಟಿನ ಸೂಚನೆಯನ್ನು ಯಾರೂ ಉಲ್ಲಂಘಿಸುವಂತಿಲ್ಲ. ನಗರದಲ್ಲಿ ಯಾರೂ ಯಾವುದೇ ಪ್ರದೇಶಕ್ಕೆ ಭೇಟಿ ನೀಡುವಂತಿಲ್ಲ ಎಂದು ಸೂಚಿಸಿದ್ದಾರೆ.

ಮನೆಯಲ್ಲಿರಿ ಸುರಕ್ಷಿತವಾಗಿರಿ. ಬದುಕಿ, ಬದುಕಲು ಬಿಡಿ, ಜೀವ ಅತ್ಯಮೂಲ್ಯವಾದದ್ದು. ಹೀಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ಜಿಲ್ಲೆಯ ಜನರ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next