Advertisement
ಉಳ್ಳಾಲದ ಕಿಲಿರಿಯಾನಗರ, ಕೈಕೋ, ಸುಭಾಷ್‌ನಗರ, ಮುಕ್ಕಚ್ಚೇರಿ ಹಾಗೂ ಸೋಮೇಶ್ವರದ ಉಚ್ಚಿಲ ಪೆರಿಬೈಲು ಪ್ರದೇಶದ 3 ಮನೆಗಳಿಗೆ ಅಲೆಗಳು ಅಪ್ಪಳಿಸುತ್ತಿವೆ.
ಉಚ್ಚಿಲದ ಪೆರಿಬೈಲು ಭಾಗದಲ್ಲಿ ಬೆಳಗ್ಗಿನಿಂದ ಅಲೆಗಳ ಅಬ್ಬರ ಹೆಚ್ಚಾಗಿ ಮೋರಿಯಲ್ಲಿ ಮರಳು ತುಂಬಿ ಸೋಮೇಶ್ವರ ಸಂಪರ್ಕಿಸುವ ರಸ್ತೆ ಯಲ್ಲಿ ನೀರು ತುಂಬಿತ್ತು. ಬಾವಿಗಳಲ್ಲಿ ಉಪ್ಪು ನೀರು ತುಂಬಿದ್ದರಿಂದ ಕುಡಿ ಯಲು ನೀರಿನ ಅಭಾವ ಎದು ರಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಸೋಮೇ ಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ ಅವರು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸು
ವುದಾಗಿ ಮತ್ತು ಮೋರಿ ಸರಿಪಡಿಸು
ವುದಾಗಿ ಭರವಸೆ ನೀಡಿದ್ದಾರೆ.
ಕೈಕೋ, ಕಿಲೆರಿಯಾನಗರ, ಸುಭಾಷ್ ನಗರ ಪರಿಸರದ ಜನರನ್ನು ನಿರಂತರ ಅವಗಣಿಸಲಾಗುತ್ತಿದೆ. 3 ಸೆಂಟ್ಸ್ ಜಾಗ ಮತ್ತು 3.30 ಲಕ್ಷ ರೂ. ಕೊಡುವ ಭರವಸೆಯನ್ನು ಪೊನ್ನು ರಾಜ್ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ನೀಡಿದ್ದರು. 2017ರ ಎಪ್ರಿಲ್ ತಿಂಗಳಲ್ಲಿ ಬರ್ಮ್ ವಿಚಾರ ದಲ್ಲಿ ಎಡಿಬಿ ಎಂಜಿನಿಯರ್ ಮೂರು ತಿಂಗಳಲ್ಲಿ 700 ಮೀ. ಉದ್ದಕ್ಕೆ ತಡೆಗೋಡೆ ಮುಗಿಸುವ ಭರವಸೆ ನೀಡಿ ದ್ದರು. ಆದರೆ ಈವರೆಗೂ ಪೂರೈ ಸಿಲ್ಲ. ಎಂದು ಸ್ಥಳೀಯ ನಿವಾಸಿ ಖಾದರ್ ಆರೋಪಿಸಿದರು. ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲಾಧಿ ಕಾರಿ, ತಹಶೀಲ್ದಾರ್ ಮತ್ತು ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಜೆಡಿಎಸ್ ಮುಖಂಡ ನಝೀರ್ ಉಳ್ಳಾಲ ತಿಳಿಸಿದರು.
ಮುಂಜಾಗ್ರತಾ ಕ್ರಮ
ಉಳ್ಳಾಲದ 41 ಮನೆಗಳು ಅಪಾಯ
ದಲ್ಲಿದ್ದು, ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ. ಬುಧವಾರ ಬೆಳಗ್ಗೆ ಕಿಲೇರಿಯಾ ನಗರದಲ್ಲಿರುವ ಅಂಗನವಾಡಿ ಮಕ್ಕಳನ್ನು ಮುಂಜಾ ಗ್ರತಾ ಕ್ರಮವಾಗಿ ಮನೆಗಳಿಗೆ ವಾಪಸ್ ಕಳುಹಿಸಲಾಗಿದೆ ಎಂದು ಪೌರಾಯುಕ್ತೆ ವಾಣಿ ಆಳ್ವ ತಿಳಿಸಿದ್ದಾರೆ.
Related Articles
ಸುರತ್ಕಲ್‌ನಲ್ಲಿ ಮುನ್ನೆಚ್ಚರಿಕೆ
ಲುಬನ್ ಚಂಡಮಾರುತದಿಂದಾಗಿ ಕರಾವಳಿಯ ಪಣಂಬೂರು, ಸುರತ್ಕಲ್‌ನಲ್ಲಿ ಸಮುದ್ರ ತೀರ ಪ್ರಕ್ಷುಬ್ಧಗೊಂಡಿದ್ದು ಪ್ರವಾಸಿಗರು ನೀರಿಗಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಸುರತ್ಕಲ್ ಪ್ರದೇಶದಲ್ಲಿದ್ದ ಕಾಂಡ್ಲಾ ಗಿಡಗಳು ಸಮುದ್ರಪಾಲಾಗಿವೆ. ಸಮೀಪದ ಅಂಗಡಿ ಶೆಡ್‌ಗಳಿಗೆ ನೀರು ನುಗ್ಗಿದೆ. ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಜೀವ ರಕ್ಷಕರು ಎಚ್ಚರಿಕೆ ನೀಡುತ್ತಿದ್ದಾರೆ. ತೀರ ಪ್ರದೇಶ ವಾಸಿಗಳು ಅ. 14ರ ವರೆಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
Advertisement
ದೋಣಿಗಳ ರಕ್ಷಣೆಮರವಂತೆಯಲ್ಲೂ ಕಡಲು ಬುಧವಾರ ಪ್ರಕ್ಷುಬ್ಧಗೊಂಡು ದೊಡ್ಡ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿವೆ. ಕಡಲ ತೀರದಲ್ಲಿ ನಿಲ್ಲಿಸಿದ್ದ ಎಂಜಿನ್ ಅಳವಡಿಸಿದ ಸುಮಾರು 20 ಸಾಂಪ್ರದಾಯಿಕ ದೋಣಿಗಳು ಅಪಾಯಕ್ಕೆ ಸಿಲುಕಿದ್ದು, ಮೀನುಗಾರರು ದೋಣಿಗಳನ್ನು ಎಳೆದು ಸುರಕ್ಷಿತ ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿದರು.