Advertisement

ಉಳ್ಳಾಲ: ಕಡಲ್ಕೊರೆತ; ಮನೆಗಳು ಅಪಾಯದಲ್ಲಿ

11:49 AM Jul 08, 2019 | keerthan |

ಉಳ್ಳಾಲ: ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲದಲ್ಲಿ ರವಿವಾರ ಕಡಲ್ಕೊರೆತ ಆರಂಭವಾಗಿದ್ದು, ಸೋಮೇಶ್ವರ ಉಚ್ಚಿಲದಲ್ಲಿ ತಾತ್ಕಾಲಿಕ ತಡೆಗೋಡೆಯ ಕಲ್ಲುಗಳು ಸಮುದ್ರಪಾಲಾಗಿವೆ. ಸುಮಾರು 10ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ.

Advertisement

ಕೆಲವು ದಿನಗಳಿಂದ ಮಳೆ ಕಡಿಮೆಯಿದ್ದರೂ ವೇಗವಾದ ಗಾಳಿಯಿಂದಾಗಿ ಸಮುದ್ರದ ಅಲೆಗಳು ಅಬ್ಬರಿಸುತ್ತಿವೆ. ರವಿವಾರ ಸಂಜೆಯ ವೇಳೆಗೆ ಸುಮಾರು 200 ಮೀ. ಉದ್ದಕ್ಕೆ ಕಡಲ ತೀರದಲ್ಲಿ ಹಾಕಲಾಗಿರುವ ಕಲ್ಲುಗಳ ಅಡಿಯ ಮರಳು ಕರಗಿ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ.

ರೂಪೇಶ್‌, ಸಂತೋಷ್‌, ತಾರಾನಾಥ್‌, ಸಂಜೀವ, ಕಿಶೋರ್‌, ಚಿದಾನಂದ, ಪ್ರದೀಪ್‌ ಅವರ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದು, ಚಂದಪ್ಪ ಅವರ ಅಂಗಡಿಗೂ ಹಾನಿಯಾಗಿದೆ. ಈ ಭಾಗದಲ್ಲಿ ತಾತ್ಕಾಲಿಕ ಬ್ರೇಕ್‌ವಾಟರ್‌ ಕಾಮಗಾರಿ ಆರಂಭದಿಂದ ಈ ಸಮಸ್ಯೆ ಹೆಚ್ಚಾಗಿದೆ. ಉಳ್ಳಾಲದ ಸೀಗ್ರೌಂಡ್‌, ಕಿಲೇರಿಯಾ ನಗರ, ಮುಕ್ಕಚ್ಚೇರಿ ಪ್ರದೇಶದಲ್ಲೂ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿವೆ.

ಮಲ್ಪೆಯಲ್ಲಿ ಕಡಲುಬ್ಬರ
ಮಲ್ಪೆ: ಮಲ್ಪೆ ಪರಿಸದಲ್ಲೂ ಸಮುದ್ರ ಪ್ರಕ್ಷುಬ್ಧವಾಗಿದ್ದು ಬೃಹತ್‌ ಅಲೆಗಳು ದಂಡೆಗೆ ಅಪ್ಪಳಿಸುತ್ತಿವೆ.  ರವಿವಾರ ಸಂಜೆ ವೇಳೆ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ನೀರಿಗೆ ಇಳಯದಂತೆ ಹಾಕಿರುವ ನೆಟ್‌ ಸಮೀಪದವರೆಗೂ ಅಲೆಗಳು ನುಗ್ಗಿ ಬಂದಿದ್ದವು. ತೀರದ ಯಾವುದೇ ಭಾಗದಲ್ಲಿ ಸಮುದ್ರ ಕೊರೆತ ಕಾಣಿಸಿಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next