Advertisement
ಸಸಿಹಿತ್ಲುವಿನ ಕೊನೆಯ ಬಸ್ ನಿಲ್ದಾಣದ ಬಳಿಯ ಮುಂಡ ಪ್ರದೇಶದಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದ್ದು, ಸ್ಥಳೀಯ ಸುಮಾರು 10 ಮನೆಗಳ 200 ಮೀ. ಅಂತರದಲ್ಲಿ ಅಲೆಗಳು ಬಡಿಯುತ್ತಿದೆ. ಕಡಲ ಕೊರೆತದಿಂದ ತೆಂಗಿನ ಮರಗಳ ಸಹಿತ ಗಾಳಿ ಮರಗಳು ಕಡಲಿಗೆ ಈಗಾಗಲೇ ಸೇರಿದೆ. ಶನಿವಾರ ಮಧ್ಯಾಹ್ನದ ನಂತರ ಭಾರೀ ಗಾಳಿಯೂ ಬೀಸುತ್ತಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಪ್ರತಿಕ್ರಿಯಿಸಿ ಈ ಭಾಗದಲ್ಲಿ ಕಡಲ ಕೊರೆತಕ್ಕೆ ಮುಂಜಾಗ್ರತೆಗಾಗಿ ಕಲ್ಲುಗಳ ಶಾಶ್ವತ ತಡೆಗೋಡೆ ಇಲ್ಲದಿರುವುದರಿಂದ ಸಮುದ್ರದ ಅಂಚಿನಲ್ಲಿ ಆಳವಾದ ಗುಂಡಿಗಳು ಬಿದ್ದಿದೆ ಇದು ಅಲೆಗಳು ಅಬ್ಬರವಾಗಿ ಮೇಲೇಳಲು ಪ್ರಮುಖ ಕಾರಣವಾಗಿದೆ. ಗಾಳಿಯೂ ಇರುವುದರಿಂದ ಸಮುದ್ರ ಅಬ್ಬರವಾಗಿದೆ ಎಂದು ತಿಳಿಸಿದ್ದಾರೆ.
ಕಿರಿಮಂಜೇಶ್ವರ ಗ್ರಾಮದ ಆದ್ರಗೊಳಿ ಅಲ್ಲಿ ತೀವ್ರ ಕಡಲ ಕೊರೆತ ಮನೆಗಳಿಗೆ ಹಾನಿ ಆಗುತ್ತಿದೆ. ಸ್ಥಳಕೆ ಬೈಂದೂರು ತಹಶೀಲ್ದಾರು ಬಸಪ್ಪ ಪೂಜಾರ್, ತಾಲ್ಲೂಕು ಪಂಚಯಿತ್ ಅಧ್ಯಕ್ಷರು ಶ್ಯಾಮಲಾ ಕುಂದರ, ಗ್ರಾಮ ಪಂಚಯಿತ್ ಉಪಾಧ್ಯಕ್ಷರಾದ ಶೇಖರ ಖಾರ್ವಿ ,ಗ್ರಾಮ ಪಂಚಯಿತ್ ಸದಸ್ಯರಾದ ಕೃಷ್ಣ ಭೇಟಿ ನೀಡಿದರು.
ಬಡಾ ಗ್ರಾಮ ಉಚ್ಚಿಲ ಮತ್ತು ಪಡುಬಿದ್ರಿ ಗಳಲ್ಲಿ ಸಮುದ್ರ ಕೊರೆತ ಉಲ್ಬಣಿಸಿದ್ದು ಬಡಾ ಗ್ರಾಮದ ಸುಮಾರು 100 ಮೀಟರ್ ಪ್ರದೇಶಕ್ಕೆ ಬಂಡೆಗಲ್ಲುಗಳನ್ನು ಹಾಕಲಾಗುತ್ತಿದೆ. ಕೊರೆತ ಪ್ರದೇಶಗಳ ವೀಕ್ಷಣೆಗೆ ಕಾಪು ಶಾಸಕ ಲಾಲಾಜಿ ಮೆಂಡನ್ ಆಗಮಿಸಿದರು.
Related Articles
Advertisement