ಸುರತ್ಕಲ್ : ಮುಕ್ಕ ಸಮೀಪದ ಮಿತ್ರ ಪಟ್ಟಣ ಭಾಗದಲ್ಲಿ ಬುಧವಾರದಿಂದ ಭಾರಿ ಪ್ರಮಾಣದಲ್ಲಿ ಕಡಲ್ಕೊರೆತ ಸಂಭವಿಸುತ್ತಿದ್ದು ಪರಿಣಾಮ ಇಲ್ಲಿನ ಮೀನುಗಾರಿಕಾ ರಸ್ತೆ ಅಪಾಯದ ಅಂಚಿನಲ್ಲಿದೆ.
ಈಗಾಗಲೇ ಈ ಪ್ರದೇಶದಲ್ಲಿ ಹಾಕಲಾದ ಬೃಹತ್ ಕಲ್ಲುಗಳು ಸಮುದ್ರ ಪಾಲಾಗಿದ್ದು, ಸಮುದ್ರದ ಬೃಹತ್ ಅಲೆಗಳು ರಸ್ತೆಗೆ ಬಡಿಯುತ್ತಿದ್ದು ರಸ್ತೆಯೂ ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಜಿಲ್ಲಾಡಳಿತ ತಕ್ಷಣ ಕಡಲ್ಕೊರೆತವನ್ನು ತಡೆಯದಿದ್ದಲ್ಲಿ ಮೀನಕಳಿಯಲ್ಲಿ ರಸ್ತೆಗಳು ಸಮುದ್ರ ಪಾಲಾದ ರೀತಿಯಲ್ಲೇ ಇಲ್ಲಿನ ರಸ್ತೆಗಳು ಸಮುದ್ರ ಪಾಲಾಗುವ ಅಪಾಯ ಎದುರಾಗಲಿದೆ ಎನ್ನಲಾಗಿದೆ.
ಒಂದು ವೇಳೆ ರಸ್ತೆ ಸಮುದ್ರ ಪಾಲದಲ್ಲಿ ರಸ್ತೆಯ ಅಂಚಿನಲ್ಲಿರುವ ಮನೆಗಳು ಅಪಾಯದ ಅಂಚಿಗೆ ಸಿಲುಕುವ ಸಾಧ್ಯತೆ ಇದೆ.
ಈ ಕುರಿತು ಸ್ಥಳೀಯ ಕಾರ್ಪೊರೇಟರ್ ಶೋಭಾ ರಾಜೇಶ್ ಅವರು ಕಡಲ್ಕೊರೆತದ ಕುರಿತಾಗಿ ಜಿಲ್ಲಾಡಳಿತಕ್ಕೆ ಈಗಾಗಲೇ ಮಾಹಿತಿಯನ್ನು ನೀಡಿದ್ದು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ನಿಗದಿತ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹಕ್ಕೆ ಗಮನ ಕೊಡಿ:ಅಧಿಕಾರಿಗಳಿಗೆ ಸಚಿವ ಎಂಟಿಬಿ