Advertisement

ಎಸ್ ಡಿಎಂಸಿ ಸದಸ್ಯರ ತರಬೇತಿ ಶಿಬಿರ ಸಮಾರೋಪ

07:45 PM Mar 26, 2021 | Team Udayavani |

ಶಿಗ್ಗಾವಿ: ಶಕ್ತಿ-ಸಾಮರ್ಥ್ಯ ಇದ್ದವರು ಜಗತ್ತನ್ನು ಆಳುವ ಇತಿಹಾಸದ ಕಾಲ ಇಂದು ಬದಲಾಗಿದೆ. ಪ್ರಸಕ್ತ ದಿನಮಾನಗಳಲ್ಲಿ ವಿದ್ಯಾವಂತರು ಬುದ್ದಿಶಕ್ತಿಯಿಂದ ಜಗತ್ತನ್ನು ಆಳುವಂತಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಪರಮೇಶಪ್ಪ ಹರಿಜನ ಹೇಳಿದರು.

Advertisement

ತಾಲೂಕಿನ ಹುಣಶೀಕಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿ ಸದಸ್ಯರ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಜಗತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಮುಂದುವರೆದಂತೆ ಖಾಸಗಿ ಶಾಲೆಗಳು ಸ್ಮಾರ್ಟ್‌ ಕ್ಲಾಸ್‌ನಂತಹ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಿ ಆಕರ್ಷಣೆ ನೀಡುತ್ತಿವೆ. ಸರ್ಕಾರಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ. ಪ್ರಸಕ್ತ ಸಾಲಿನ ಶೈಕ್ಷಣಿಕ ಜ್ಞಾನ ಪಡೆಯಲು ಹಲವಾರು ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ನಾವೂ ಜ್ಞಾನ ನೀಡಬೇಕಾಗುತ್ತದೆ. ನಮ್ಮ ಶಾಲೆಗಳ ವಿದ್ಯಾರ್ಥಿಗಳು ಕೌಶಲ್ಯದಿಂದ ಹಿಂದುಳಿಯಬಾರದು.ಸರ್ಕಾರಿ ಶಾಲೆಗಳು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಬೇಕಾದರೆ, ಸಮುದಾಯಗಳು, ಸಾರ್ವಜನಿಕರು ಶಾಲೆಯ ಅರ್ಥಿಕ ಬೆಳವಣಿಗೆಗೆ ಸಹಕರಿಸಿ ಅಭಿವೃದ್ಧಿಪಡಿಸಬೇಕು. ಜ್ಞಾನವಿದ್ದರೆ ಜಗತ್ತಿನ ಯಾವ ಮೂಲೆಯಲ್ಲಾದರೂ ಬದುಕು ಕಟ್ಟಿಕೊಳ್ಳಬಹುದು. ಅದಕ್ಕೆ ಶಕ್ತಿ ಸಾಮರ್ಥ್ಯದ ಅವಶ್ಯಕತೆಯಿಲ್ಲ. ಗ್ರಾಮೀಣ ಪ್ರದೇಶದಲ್ಲೂ ಸರ್ಕಾರಿ ಶಾಲೆಗಳಿಂದ ಉತ್ತಮ ಶಿಕ್ಷಣ ನಿರೀಕ್ಷಿಸಲು ಸಾಧ್ಯವೆಂದರು.

ಪ್ರಧಾನ ಗುರುಗಳಾದ ರಮೇಶ.ಎನ್‌. ಬಾರ್ಕೇರ ಪ್ರಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ. ನೂತನ ಅಧ್ಯಕ್ಷರು ಸರ್ಕಾರಿ ಶಾಲೆಗಳ ಮೌಲ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಥಮ ಹಂತದಲ್ಲಿಯೇ ಶಾಲೆಯ ಮಕ್ಕಳಿಗೆ ಕಂಪೂÂಟರ್‌ ಶಿಕ್ಷಣ ತರಬೇತುಗೊಳಿಸಲು ಆಸಕ್ತಿ ಹೊಂದಿದ್ದಾರೆ. ಸ್ವಂತ ಖರ್ಚಿನಲ್ಲಿ ಲ್ಯಾಪ್‌ಟಾಪ್‌, ಕಂಪೂÂಟರ್‌ ನೀಡಿದ್ದಾರೆ. ಶಾಲಾ ವಿದ್ಯಾರ್ಥಿಗಳ ಆಧುನಿಕ ಶಿಕ್ಷಣದ ಅನುಭವ ಹೊಂದಲು ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಸುಧಾರಣಾ ಸಮಿತಿ ನೂತನ ಅಧ್ಯಕ್ಷ ಪರಮೇಶಪ್ಪ ಹರಿಜನ ಅವರನ್ನು ಸನ್ಮಾನಿಸಲಾಯಿತು.

ಶಾಲಾ ಅಭಿವೃದ್ಧಿ ಸಮೀತಿ ಸದಸ್ಯ ಚಂದ್ರಶೇಖರ ಹಿತ್ತಲಮನಿ, ರಾಯಪ್ಪ ಹೊಂಬಳ, ಗದಿಗೆಪ್ಪ ಸಂದಿಕೇರಿ, ಮಹಾಂತೇಶ ಬಜಂತ್ರಿ, ಪಾರ್ವತೆವ್ವ ಸಂದಿಕೇರಿ, ಫಕ್ಕೀರಪ್ಪ ತಳವಾರ, ಸಿಆರ್‌ಪಿ ಎಂ.ಎನ್‌. ತೆವರಿ, ಶಿಕ್ಷಕ ಬಿ.ಬಿ. ಪುಟ್ಟಪ್ಪನವರ, ಮಂಜಯ್ನಾ ಹೂಲಿಮಠ, ಗ್ರಾಮದ ಹಿರಿಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next