Advertisement

ಎಸ್‌ಡಿಎಂ ಆಯುಷ್‌ ಕ್ವಾಥ ಬಿಡುಗಡೆ; ಪ್ರಾಕೃತಿಕ ರೋಗ ನಿರೋಧಕ ಔಷಧ

01:40 AM Jun 07, 2020 | Sriram |

ಉಡುಪಿ: ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ರೋಗ ನಿರೋಧಕ ಶಕ್ತಿ ಯನ್ನು (ವ್ಯಾಧಿ ಕ್ಷಮತ್ವ) ವೃದ್ಧಿಸಿ ಕೊಳ್ಳುವುದು ಅವಶ್ಯಕ. ಇದಕ್ಕಾಗಿ ಆಯುಷ್‌ ಸಚಿವಾಲಯವು ಆಯುಷ್‌ಕ್ವಾಥ ಎನ್ನುವ ಗಿಡಮೂಲಿಕೆ ಗಳ ಕಷಾಯದ ವಿಧಾನ ತಿಳಿಸಿದ್ದು, ಅದರಂತೆ ಎಸ್‌ಡಿಎಂ ಆಯುರ್ವೇದ ಫಾರ್ಮಸಿಯು”ಆಯುಷ್‌ ಕ್ವಾಥ’ ಹೆಸರಿನ ಕಷಾಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement

ಶುಂಠಿ, ಕರಿಮೆಣಸು, ದಾಲ್ಚಿನ್ನಿ, ತುಳಸಿಯ ಮಿಶ್ರಣವಾಗಿರುವ ಇದು ಪ್ರಮಾಣೀಕರಿಸಿದ ಪ್ರಾಕೃತಿಕ ಆರೋಗ್ಯವರ್ಧಕ ಕಷಾಯವಾಗಿದ್ದು, ಎಲ್ಲ ವಯಸ್ಸಿನವರಿಗೆ ಉಪಯುಕ್ತವಾಗಿದೆ.ಇದು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಶೀತ, ಕೆಮ್ಮು, ನೆಗಡಿ, ಗಂಟಲ ಬಾಧೆ ಮುಂತಾದ ತೊಂದರೆಗಳನ್ನು ನಿವಾರಿಸುತ್ತದೆ. ಶರೀರದ ಚಯಾ ಪಚಯ ಪ್ರಕ್ರಿಯೆ ಸುಧಾರಣೆಗೆ ಸಹ ಕರಿಸುತ್ತದೆ.

ಈ ಕಷಾಯವನ್ನು 10ರಿಂದ 15 ಮಿ.ಲೀ. (10 ಮಿ. ಲೀ. ಕಷಾಯಕ್ಕೆ 50 ಮಿ. ಲೀ. ಕುದಿಸಿದ ನೀರು ಸೇರಿಸಿ ಚೆನ್ನಾಗಿ ಬೆರೆಸಿ ರುಚಿಗೆ ಬೆಲ್ಲ/ನಿಂಬೆ ರಸ ಸೇರಿಸಿ) ಚಹಾದಂತೆ ದಿನಕ್ಕೆ ಎರಡು ಬಾರಿ ಸೇವಿಸಬಹುದು. ಜತೆಗೆಜನರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುಷ್‌ ಕ್ವಾಥದೊಂದಿಗೆ ಹಸಿ ನೆಲ್ಲಿಕಾಯಿ ಯಿಂದಲೇ ತಯಾರಿಸಿದ ಅಷ್ಟವರ್ಗಯುಕ್ತ ಎಸ್‌ಡಿಎಂ ಚ್ಯವನಪ್ರಾಶ ಲೇಹ ಮತ್ತು ಎಸ್‌ಡಿಎಂ ಅಶ್ವಗಂಧಕ್ಯಾಪ್ಸೂಲನ್ನು ಕೂಡ ದಿನಕ್ಕೆರಡು ಬಾರಿ ಸೇವಿಸಬಹುದೆಂದು ಫಾರ್ಮಸಿಯ ಪ್ರಕಟನೆ ತಿಳಿಸಿದೆ.

ಗುಣಮಟ್ಟಕ್ಕೆ ಒತ್ತು
ಎಸ್‌ಡಿಎಂ ಫಾರ್ಮಸಿ ಕಳೆದ 60 ವರ್ಷಗಳಿಂದ 300ಕ್ಕೂ ಮೇಲ್ಪಟ್ಟು ಔಷಧಗಳ ತಯಾರಿಕೆಯಲ್ಲಿ ಪರಿಣತಿ ಪಡೆದಿದ್ದು, ಆಯುರ್ವೇದದ ಮೂಲ ತತ್ತÌಗಳನ್ನು ಪಾಲಿಸುತ್ತಾ ಕಾಲಕ್ಕನುಗುಣವಾಗಿ ಆಧುನಿಕ ತಂತ್ರಜ್ಞಾನದೊಂದಿಗೆ ಗುಣಮಟ್ಟದ ಔಷಧಗಳನ್ನು ತಯಾರಿಸುತ್ತಿದೆ. ಗುಣಮಟ್ಟ ಮತ್ತು ಬದ್ಧತೆಗೆ ಐಎಸ್‌ಒ ಹಾಗೂ ಜಿಎಂಪಿ ಪ್ರಮಾಣೀಕೃತಗೊಂಡಿದೆ. ಎಸ್‌ಡಿಎಂ ತಯಾರಿಕೆಯ ಸಂಧಿಲಿನ್‌ ನೋವು ನಿವಾರಕ ಲಿನಿಮೆಂಟ್‌ ಎಣ್ಣೆಯು ಜನಮಾನಸದಲ್ಲಿ ಚಿರಪರಿಚಿತವಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next