Advertisement

ಎಸ್‌ಡಿಎಂ ಪ್ರೌಢಶಾಲೆ: ಇವಿಎಂ ಬಳಸಿ ಮತದಾನ

12:59 PM Jul 01, 2018 | Team Udayavani |

ಬೆಳ್ತಂಗಡಿ : ಮಕ್ಕಳಲ್ಲಿ ಚುನಾವಣೆಯ ಕುರಿತು ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಬ್ಯಾಲೆಟ್‌ ಉಪಯೋಗಿಸಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆರಿಸುವುದು ಈಗ ಸಾಮಾನ್ಯ. ಆದರೆ ಉಜಿರೆ ಎಸ್‌ ಡಿಎಂ ಅನುದಾನಿತ ಪ್ರೌಢಶಾಲೆ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ ಬಳಕೆ ಮಾಡಿ ಶಾಲಾ ನಾಯಕರನ್ನು ಆರಿಸಿದೆ.

Advertisement

ಎಸ್‌ಡಿಎಂ ಪೊಲಿಟೆಕ್ನಿಕ್‌ ಇನ್ನೋವೇಶನ್‌ ಕ್ಲಬ್‌ ತಯಾರಿಸಿದ ಇವಿಎಂ ಮೂಲಕ ಶುಕ್ರವಾರ ಚುನಾವಣೆ ನಡೆದಿದೆ. ಎಸ್‌ಡಿಎಂ ಡಿಪ್ಲೊಮಾ ಕಾಲೇಜಿನ ಪ್ರಾಧ್ಯಾಪಕರಾದ ಸಂಪತ್‌ಕುಮಾರ್‌ ಹಾಗೂ ನಿಕಿತ್‌ ಡಿ.ಆರ್‌. ನೇತೃತ್ವ ವಹಿಸಿದ್ದರು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬಂದು ತಮ್ಮ ಶಾಲಾ ಗುರುತಿನ ಚೀಟಿ ಪ್ರದರ್ಶಿಸಿ ಮತದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಚುನಾವಣಾ ಆಯೋಗದ ಮಾದರಿಯ ಹಾಗೂ ಪರಿಸರ ಸ್ನೇಹಿ ವಿಧಾನದ ಮೂಲಕ ಮತದಾನ ನಡೆಸಿದ್ದೇವೆ. ಸಮಯ ಉಳಿತಾಯ, ಪೇಪರ್‌ ಮಿತವಾದ ಬಳಕೆಯ ಜತೆಗೆ ಮಕ್ಕಳಲ್ಲಿ ಮತದಾನದ ಜಾಗೃತಿಯ ದೃಷ್ಟಿಯಿಂದ ಈ ಪ್ರಯತ್ನ ಮಾಡಲಾಗಿದೆ ಎಂದು ಶಾಲೆಯ ಚುನಾವಣಾಧಿಕಾರಿ ರಮೇಶ್‌ ಮಯ್ಯ ತಿಳಿಸಿದ್ದಾರೆ.

ಮೊದಲು ನಾವು ಚೀಟಿಯನ್ನು ಬಳಸಿ ವೋಟು ಮಾಡುತ್ತಿದ್ದೆವು. ಆದರೆ ನಮ್ಮ ಶಾಲೆಯಲ್ಲಿ ಮೊದಲ ಬಾರಿಗೆ ಇವಿಎಂ ಬಳಸಲಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವನ್ನು ಎಸ್‌ಡಿಎಂ ಟ್ರಸ್ಟಿನ ಕಾರ್ಯ ನಿರ್ವಹಣಾಧಿಕಾರಿ ಶಶಿಧರ್‌ ಶೆಟ್ಟಿ, ಸೋಮಶೇಖರ್‌ ಶೆಟ್ಟಿ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next