Advertisement

ಹೊಲದಲ್ಲಿ ಗರಿಕೆ ಕಳೆ

07:16 PM Jan 05, 2020 | mahesh |

ನಮ್ಮ ಹೊಲದಲ್ಲಿ ಗರಿಕೆ (ಜೇಕು) ಸಮಸ್ಯೆ ತುಂಬಾ ದಿನಗಳಿಂದ ಇದೆ. ಎಷ್ಟೆ ಉಳುಮೆ ಮಾಡಿದರೂ ಹೋಗಲಾಡಿಸಲು ಆಗುತ್ತಿಲ್ಲ.
– ನಾಗರಾಜ ಗೋಣೆಪ್ಪನವರ, ಹಡಗಲಿ, ಬಳ್ಳಾರಿ

Advertisement

ಪರಿಹಾರ-
ಕಳೆ ಮುಖದಲ್ಲಿದ್ದರೆ ಚೆನ್ನ, ಆದರೆ ಹೊಲದಲ್ಲಿ ಬೆಳೆವ ಕಳೆಯಿಂದ ನಷ್ಟವೇ ಹೆಚ್ಚು. “ಗರಿಕೆ’ ಬಹು ಸಮಸ್ಯಾತ್ಮಕ ಬಹುವಾರ್ಷಿಕ ಕಳೆಯಾಗಿದೆ. ಬೀಜಗಳಿಂದ ನೆಲದೊಳಗಿನ ಕಾಂಡದ ತುಂಡುಗಳಿಂದಲೂ, ಗರಿಕೆ ಬೆಳೆಯುವುದು. ಆದುದರಿಂದ ಉಳುಮೆಯಂಥ ಬೇಸಾಯ ಕ್ರಮಗಳಿಂದ ಅದರ ಹತೋಟಿ ಕಷ್ಟ. ಈ ಕ್ರಮಗಳಿಂದ ತಾತ್ಕಾಲಿಕ ಮುಕ್ತಿ ದೊರೆಯುತ್ತದೆ. ಕೆಲ ಸಮಯದ ನಂತರ ಗರಿಕೆ ಮತ್ತೆ ಬೆಳೆಯುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಎಂದರೆ ಕೀಟನಾಶಕ ಸಿಂಪಡಣೆ. ಅದೂ ಮೂರು ಬಾರಿ ಮಾಡಬೇಕಾಗುತ್ತದೆ. ಈ ಕಳೆ (ಕರಿಕೆ/ ಜೇಕು) ಹಸಿರಾಗಿದ್ದಾಗ ಪ್ರತಿ ಲೀಟರ್‌ ನೀರಿಗೆ 12- 15 ಮಿ.ಲೀ. ಗ್ಲೆ„ಫೋಸೇಟ್‌ 41 ಇ.ಸಿ. ಅಥವಾ ಪ್ಯಾರಾಕ್ಟಾಟ್‌ 24 ಇ.ಸಿ. ಹಾಗೂ 20 ಗ್ರಾಂ. ಯೂರಿಯಾವನ್ನು ಬೆರೆಸಿ ಡಬ್ಲೂ ಎಫ್.ಎನ್‌.40 ಅಥವಾ ವಿ.ಎಲ್‌.ವಿ 200 ನಾಝಲ್‌ಅನ್ನು ಕೈಚಾಲಿತ ಪಂಪಿನಿಂದ ಮೂರು ಬಾರಿ ಸಿಂಪರಣೆ ಮಾಡಬೇಕು.

ಮೊದಲನೇ ಸಿಂಪರಣೆಯನ್ನು ಮುಂಗಾರು ಮಳೆಯಾದ ನಂತರ ಹೆಚ್ಚು ಹಸುರಾಗಿದ್ದಾಗ, ಗರಿಕೆ ಮಾತ್ರ ತೊಯುವಂತೆ ಚೆನ್ನಾಗಿ ಸಿಂಪಡಣೆ ಮಾಡಬೇಕು. ಎರಡನೇ ಸಿಂಪರಣೆಯು ಮೊದಲನೆಯ ಸಿಂಪರಣೆಯನ್ನು 3 ತಿಂಗಳ ನಂತರ (90 ದಿನಗಳು) ಪುನಃ ಚಿಗುರಿ ಹುಲುಸಾಗಿ ಬೆಳೆದ ಕರಿಕೆಯ ಮೇಲೆ ಮಾತ್ರ ಸಿಂಪಡಣೆ ಮಾಡಬೇಕು.

ಮೂರನೆ ಹಾಗೂ ಕೊನೆಯ ಸಿಂಪಡಣೆಯನ್ನು ಪುನಃ ಚಿಗುರಿ ಹುಲುಸಾಗಿ ಬೆಳೆದ ಕರಿಕೆಯ ಮೇಲೆ ಮಾತ್ರ ಸಿಂಪಡಣೆ ಮಾಡಬೇಕು. ಕಳೆನಾಶಕ ಸಿಂಪರಣೆ ಮಾಡಿದ 15ರಿಂದ 20 ದಿನಗಳ‌ ನಂತರ ಯಾವುದೇ ಬೆಳೆಯನ್ನು ಬೆಳೆಯಬಹುದು. ಈ ಸಿಂಪಡಣೆ ಮಾಡುವಾಗ ಯಾವುದೇ ಬೆಳೆಗಳಿಗೆ ತಗುಲದಂತೆ ಎಚ್ಚರಿಕೆ ವಹಿಸಬೇಕು. ನಂತರ ಸಿಂಪಡಕವನ್ನು ಚೆನ್ನಾಗಿ ತೊಳೆದು ಇಡಬೇಕು. ಕಳೆನಾಶಕಗಳನ್ನು ಸಿಂಪಡಣೆ ಮಾಡಲು ಪ್ರತ್ಯೇಕ ಸಿಂಪಡಕ ಇಡುವುದು ಸೂಕ್ತ.
ಸಂಪರ್ಕ: ashokapuas@gmail.com

– ಡಾ. ಅಶೋಕ್‌ ಪಿ., ಹಿರಿಯ ಕೃಷಿ ವಿಜ್ಞಾನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next