Advertisement

ಹಾಸನದಲ್ಲಿ ಶಿಲ್ಪ ಕಲಾಕೃತಿಗಳು ಪತ್ತೆ

11:55 AM May 02, 2017 | Team Udayavani |

ಹಾಸನ: ನಗರದ ಹೊರ ವಲಯದ ದೊಡ್ಡಕೊಂಡಗೊಳ ಗ್ರಾಮದ ಕಲ್ಯಾಣಿಯಲ್ಲಿ ಹೂಳೆತ್ತುವಾಗ ಪುರಾತನ ಶಿಲ್ಪ ಕಲಾಕೃತಿಗಳು ಪತ್ತೆಯಾಗಿವೆ. ಜಲ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ದೊಡ್ಡಕೊಂಡಗೊಳ ಬಳಿಯ ಕಲ್ಯಾಣಿ(ಅರಿಶಿನಬಾವಿ)ಯಲ್ಲಿ 50ಕ್ಕೂ ಹೆಚ್ಚು ಮಂದಿ ಹೊಳೆತ್ತುವಾಗ ಈ ವಿಗ್ರಹಗಳು ಕಾಣಿಸಿಕೊಂಡಿವೆ.

Advertisement

ಇವು ಹೊಯ್ಸಳರ ಕಾಲದ ಶಿಲ್ಪ ಕಲಾಕೃತಿಗಳಾಗಿದ್ದು, ಬೇಲೂರಿನ ಚನ್ನಕೇಶವ ದೇಗುಲ ನಿರ್ಮಾಣದ ವೇಳೆ ವಿಘ್ನವಾದ ಶಿಲ್ಪ ಕಲಾಕೃತಿಗಳನ್ನು ತಂದು ಗ್ರಾಮದಲ್ಲಿರಿಸಲಾಗಿತ್ತು. ಈ ವಿಘ್ನ ಮೂರ್ತಿಗಳನ್ನು ಪೂಜಿಸುವುದು
ಅಶುಭ ಎಂದು ಆ ಕಾಲದಲ್ಲಿ ಕಲ್ಯಾಣಿಯಲ್ಲಿ ಎಸೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next