Advertisement

Supreme Court: ಶಾಸಕರು, ಸಂಸದರ ವಿರುದ್ಧ ಕ್ರಮ ರಕ್ಷಣಾತ್ಮಕ ಅಂಶದ ಬಗ್ಗೆ ಪರಿಶೀಲನೆ

11:27 PM Sep 20, 2023 | Team Udayavani |

ಹೊಸದಿಲ್ಲಿ: ಶಾಸಕರಿಗೆ ಮತ್ತು ಸಂಸತ್‌ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ವಿರುದ್ಧ ಸದ್ಯ ಇರುವ ರಕ್ಷಣಾತ್ಮಕ ಅಂಶದ ಬಗ್ಗೆ ಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್‌ ತೀರ್ಮಾನಿಸಿದೆ. ಅದಕ್ಕಾಗಿ ಏಳು ನ್ಯಾಯಮೂರ್ತಿಗಳು ಇರುವ ನ್ಯಾಯಪೀಠ ರಚಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಬುಧವಾರ ತಿಳಿಸಿದೆ.

Advertisement

ಪಿ.ವಿ.ನರಸಿಂಹ ರಾವ್‌ ಪ್ರಧಾನಿಯಾಗಿದ್ದ ವೇಳೆ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದ ವೇಳೆ ಜಾರ್ಖಂಡ್‌ ಮುಕ್ತಿ ಮೋರ್ಚಾ ಸಂಸದರು ಲಂಚ ಪಡೆದು ಮತ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಸಿಬಿಐ ತನಿಖೆಯನ್ನೂ ನಡೆಸಿತ್ತು. 1998ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಪ್ರಕಾರ  ಶಾಸಕರು ಮತ್ತು ಸಂಸದರು ವಿಧಾನಸಭೆ ಅಥವಾ ಸಂಸತ್‌ನಲ್ಲಿ ಭಾಷಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವುದರ ವಿರುದ್ಧ ಸಂವಿಧಾನದಲ್ಲಿ ರಕ್ಷಣೆ ಇದೆ ಎಂದು ಹೇಳಿತ್ತು.

2019ರಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಐವರು ಸದಸ್ಯರು ಇರುವ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿ, “ಸಾರ್ವಜನಿಕವಾಗಿ ಇದು ಅತ್ಯಂತ ಮಹತ್ವದ ವಿಚಾರ’ ಎಂದು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next