Advertisement
ಆದರೆ ಕಾಲ ಬದಲಾದಂತೆ ಆಧುನಿಕತೆ ಹೆಚ್ಚಿದಂತೆ ಎಲ್ಲದರಲ್ಲೂ ಬದಲಾವಣೆ ಆಗುತ್ತಲೇ ಇದೆ. ಅಂದು ಪುಸ್ತಕವನ್ನು ಓದಲು ಹಂಬಲಿಸುವವರ ಸಂಖ್ಯೆ ಹೆಚ್ಚಿತ್ತು. ಇಂದು ಸಾವಿರಾರು ಪುಸ್ತಕಗಳ ದೊಡ್ಡ ಗ್ರಂಥಾಲಯವಿದ್ದರೂ ಅದರಲ್ಲಿ ಓದುಗರ ಸಂಖ್ಯೆ ಅತಿ ವಿರವಾಗಿದೆ.
Related Articles
Advertisement
ಶಾಲಾ ಹಂತದಲ್ಲಿ ಮಕ್ಕಳು ಪಟ್ಟಿ ಪುಸ್ತಕಗಳಲ್ಲಿ ಹೆಚ್ಚಾಗಿ ಬರೆಯುತ್ತಿದ್ದರು. ಅನಂತರದ ಹಂತದಲ್ಲಿ ಅವರು ಮೊಬೈಲ್‌ಗಳಲ್ಲಿಯೇ ಹೆಚ್ಚಾಗಿ ತಮ್ಮ ಓದಿನ ವಿಷಯಕ್ಕಾಗಿ ಹುಡುಕಾಟ ನಡೆಸುತ್ತಾರೆ. ಕೈಯಲ್ಲಿರುವ ಮೊಬೈಲೇ ತಮ್ಮ ಪರೀಕ್ಷೆಗೆ ಬೇಕಾಗುವಂತಹ ಅಗತ್ಯ ವಿಷಯವನ್ನು ತಿಳಿಸುವಾಗ ಮತ್ತೆ ಹೋಗಿ ಪುಸ್ತಕವನ್ನು ಅರಿಸುತ್ತಾ ಅದರಲ್ಲಿ ವಿಷಯಗಳನ್ನು ಹುಡುಕಿ ಜ್ಞಾನಾರ್ಜನೆಯನ್ನು ಮಾಡಿಕೊಳ್ಳುವುದು ಕೆಲವು ವಿದ್ಯಾರ್ಥಿಗಳಿಗೆ ಕಷ್ಟದ ಕೆಲಸವೇ ಸರಿ.
ಆದರೆ ಇಂಥವರ ಮಧ್ಯದಲ್ಲಿಯೂ ಪುಸ್ತಕವನ್ನು ಓದುವುದು ತಮ್ಮ ನಿರಂತರ ಹವ್ಯಾಸವಾಗಿ ಮಾಡಿಕೊಂಡಿರುವಂತಹ ಅದೆಷ್ಟೊ ವಿದ್ಯಾರ್ಥಿಗಳು ಸಹ ಇದ್ದಾರೆ. ಎಷ್ಟೇಯಾದರೂ ಮನೆಯಲ್ಲಿ ನೀಡುವ ಸಂಸ್ಕೃತಿಯಿಂದಲೇ ನಮ್ಮ ಜೀವನ ರೂಪುಗೊಳ್ಳುತ್ತಾ ಹೋಗುತ್ತದೆ.
ಎಳೆಯವರಿದ್ದಾಗಲೇ ಅವರಿಗೆ ಕಥೆ, ಕವನ ಸಾಹಿತ್ಯ, ಬರವಣಿಗೆ ಎಲ್ಲದರಲ್ಲಿಯೂ ಆಸಕ್ತಿ ಬರುವಂತೆ ಮಾಡುವುದು ಪೋಷಕರ ಕೈಯಲ್ಲಿದೆ. ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ತಿಕ್ಕಿ ತೀಡಿ ಒಳ್ಳೆಯ ರೂಪವನ್ನು ಕೊಡುವ ಶಕ್ತಿ ಇರುವುದು ತಂದೆ, ತಾಯಿಗೆ ಹಾಗೂ ಶಿಕ್ಷಕರಿಗೆ.
ಆದರೆ ಅವರ ಮಾತಿಗೂ ಬೆಲೆಕೊಡದಂತೆ ನಡೆದುಕೊಂಡು ಮನಬಂದಂತೆ ಇರುವ ಮಕ್ಕಳು ಎಂದಿಗೂ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ಪಡೆದರು ಉಪಯೋಗಕ್ಕೆ ಬಾರದೆ ಹೋಗುವುದು ನಿಶ್ಚಿತ.
ನಾವು ಕಲಿಯುವ ಪ್ರತಿಯೊಂದು ಪಾಠ ನಮ್ಮ ಮುಂದಿನ ಜೀವನಕ್ಕೆ ಮಾರ್ಗವಾಗಿರಬೇಕು. ಹೀಗೆ ಉತ್ತಮ ದಾರಿಗೆ ಕೊಂಡೊಯ್ಯುವ ಪ್ರಯತ್ನವನ್ನು ಪುಸ್ತಕ ಮಾಡುತ್ತದೆ. ಅವಕಾಶದ ನೂರಾರು ದಾರಿಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಹೀಗಾಗಿ ಯಾವಾಗಲು ಸಾಧ್ಯವಾದಷ್ಟು ಸರಿಯಾದ, ಆಳವಾದ ಜ್ಞಾನವನ್ನು ಪಡೆಯಲು ಪುಸ್ತಕವನ್ನು ಓದುವ, ಪುಟ ತೆಗೆಯುವ ಮೂಲಕ ನಮ್ಮ ಜ್ಞಾನಾರ್ಜನೆಯನ್ನು ಮಾಡಿಕೊಳ್ಳೋಣ.
-ಭಾವನಾ ಪ್ರಭಾಕರ್
ಶಿರಸಿ