ಬೆಂಗಳೂರು: ಕೇಂದ್ರ ಸರಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಪ್ರಜ್ವಲ್ ಪ್ರಕರಣ ವನ್ನು ಎಐಸಿಸಿ ಮಟ್ಟದಲ್ಲೇ ಸಿದ್ಧಪಡಿಸಲಾಗಿದ್ದು, ರಣದೀಪ್ ಸಿಂಗ್ ಸುರ್ಜೇವಾಲ ಚಿತ್ರಕತೆ ಬರೆದಿದ್ದಾರೆ. ನಿರ್ದೇಶನ ಸಿದ್ದರಾಮಯ್ಯ, ನಿರ್ಮಾಪಕ ಡಿ.ಕೆ. ಶಿವಕುಮಾರ್ ಅವರದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ವೀರೇಂದ್ರ ಪಾಟೀಲ್ ಅಧಿಕಾರ ಕಿತ್ತುಕೊಂಡು, ಯಡಿಯೂರಪ್ಪ ನವರನ್ನು ಜೈಲಿಗೆ ಕಳುಹಿಸಿ ಕಾಂಗ್ರೆಸ್ ಲಿಂಗಾಯತರಿಗೆ ಅಪಮಾನ ಮಾಡಿತ್ತು. ಈಗ ಒಕ್ಕಲಿಗರನ್ನು ಗುರಿ ಮಾಡಿ ಪೆನ್ ಡ್ರೈವ್ ಹಂಚಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಐಟಿ ರಬ್ಬರ್ ಸ್ಟಾಂಪ್ ಆಗಿದೆ. ವೀಡಿಯೋ ಹಂಚು ವುದು ಅಪರಾಧ ಎಂದು ಎಸ್‌ಐಟಿಯೇ ಹೇಳಿದೆ. ಆದರೆ ಪೆನ್ ಡ್ರೈವ್ ಕೊಟ್ಟ ಪ್ರಜ್ವಲ್‌ನ ಮಾಜಿ ಕಾರು ಚಾಲಕ ನನ್ನು ಜೈಲಿಗೆ ಹಾಕಿಲ್ಲ. ಈ ಪ್ರಕರಣದಲ್ಲಿ ಸರಕಾರದ ಪಾತ್ರವಿದೆ ಎಂದು ಕಾನೂನು ತಜ್ಞರೇ ಹೇಳಿದ್ದಾರೆ. ಆದ್ದರಿಂದ ರಾಜ್ಯಪಾಲರು ಸರಕಾರವನ್ನು ವಜಾಗೊಳಿಸಬೇಕು ಎಂದರು.
ಶಿವರಾಮೇಗೌಡ ವಿರುದ್ಧ ಕ್ರಮ
ಶಿವರಾಮೇಗೌಡ ಬಿಜೆಪಿಯಲ್ಲಿದ್ದೂ ಡಿ.ಕೆ. ಶಿವ ಕುಮಾರ್ ಅವರನ್ನು ಭೇಟಿ ಮಾಡಿ ದ್ದಾರೆ. ಪಕ್ಷ ಈ ಬಗ್ಗೆ ಕ್ರಮ ತೆಗೆದು ಕೊಳ್ಳು ತ್ತದೆ. ಇದೊಂದು ಷಡ್ಯಂತ್ರವಾಗಿದ್ದು, ಆರೋಪಿಗಳ ಬಂಧನಕ್ಕೆ ಸಿಬಿಐ ತನಿಖೆಯಾಗಬೇಕು. ಪ್ರಜ್ವಲ್ ವಿದೇಶಕ್ಕೆ ಹೋದ ಮೇಲೆ ಮೋದಿಯವರಿಗೆ ಅವಮಾನ ಮಾಡಬೇಕೆಂಬುದು ಕಾಂಗ್ರೆಸ್ ನಾಯಕರ ಉದ್ದೇಶವಾಗಿತ್ತು ಎಂದು ಆರೋಪಿಸಿದರು.