Advertisement

ವಾಹನ ಮಾಲಿಕರೇ ಗಮನಿಸಿ.. ರಾಜ್ಯದಲ್ಲೂ ಬರಲಿದೆ ಗುಜರಿ ನೀತಿ: ಏನಿದು ಸ್ಕ್ರ್ಯಾಪ್ ರೂಲ್ಸ್?

10:41 AM Aug 06, 2022 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ಮಾದರಿಯಲ್ಲಿ ಹಳೆ ವಾಹನಗಳನ್ನು ಗುಜರಿಗೆ ಹಾಕುವ ಸ್ಕ್ರ್ಯಾಪ್ ನೀತಿ ರಾಜ್ಯದಲ್ಲೂ ಜಾರಿಗೆ ಬರಲಿದೆ.

Advertisement

ರಾಜ್ಯ ಸರ್ಕಾರದ ಹೊಸ ನಿಯಮದಂತೆ ಇನ್ನು ಮುಂದೆ 15 ವರ್ಷ ಹಳೆಯದಾದ ವಾಹನವನ್ನು ಗುಜರಿಗೆ ಹಾಕುವುದು ಅನಿವಾರ್ಯವಾಗುತ್ತದೆ.

2023 ರಿಂದ, ಎಲ್ಲಾ ರೀತಿಯ ಭಾರಿ ವಾಣಿಜ್ಯ ವಾಹನಗಳು ಕಡ್ಡಾಯ ಫಿಟ್ನೆಸ್ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಈ ನೀತಿಯು ಜೂನ್ 2024ರಿಂದ ಖಾಸಗಿ ಮತ್ತು ಇತರ ವಾಹನಗಳ ಗುಂಪುಗಳಿಗೆ ಅನ್ವಯಿಸುತ್ತದೆ.

ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಮೋಟಾರ್ ವಾಹನ (ರಿಜಿಸ್ಟ್ರೇಷನ್ ಮತ್ತು ವಾಹನಗಳ ಚಲನಾ ಸ್ಕ್ರಾಫ್ ಫೆಸಿಲಿಟಿ) ನಿಯಮ 2021ನ್ನು, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ನಿಯಮವನ್ನು ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.

ಈ ನೀತಿಯಲ್ಲಿ ಹೊಸ ವಾಹನ ಖರೀದಿಗೆ ಪ್ರೋತ್ಸಾಹ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಹಳೆ ವಾಹನ ಗುಜರಿಗೆ ಹಾಕಿರುವ ಪ್ರಮಾಣ ಪತ್ರವನ್ನು ಹೊಸ ವಾಹನ ಖರೀದಿ ವೇಳೆ ತೋರಿಸಿದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ.

Advertisement

ಇದನ್ನೂ ಓದಿ:ಕೊಟ್ಟಿಗೆಹಾರ : ಮನೆಯ ಹಿಂಭಾಗದಲ್ಲೇ ನೇಣಿಗೆ ಶರಣಾದ ವ್ಯಕ್ತಿ, ಕಾರಣ ನಿಗೂಢ

ಹಳೇ ವಾಹನಗಳ ಗುಜರಿ ಮೊತ್ತವನ್ನೂ ನಿಗದಿ ಮಾಡಲಾಗಿದೆ. ಹೊಸ ವಾಹನದ ಎಕ್ಸ್ ಶೋರೂಂ ದರದ ಶೇ.4ರಿಂದ ಶೇ. 6ರಷ್ಟನ್ನು ಗುಜರಿಗೆ ಹಾಕುವ ವಾಹನಕ್ಕೆ ನೀಡಬೇಕು. ಈ ನೀತಿಯಂತೆ ನೋಂದಣಿ ಅವಧಿ ಮುಗಿದ ಬಳಿಕ ಎಲ್ಲ ವಾಹನಗಳು ಕಡ್ಡಾಯವಾಗಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕು.

ವಾಣಿಜ್ಯ ಬಳಕೆಯ ವಾಹನಗಳು 15 ವರ್ಷ ಪೂರೈಸಿದ ಕೂಡಲೇ ಫಿಟ್ನೆಸ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈಯಕ್ತಿಕ ಬಳಕೆಯ ವಾಹನಗಳಿಗೆ 20 ವರ್ಷ ಪೂರೈಸಿದ ಮೇಲೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು. ಫಿಟ್ನೆಸ್ ಪರೀಕ್ಷೆಯಲ್ಲಿ ಅನುತೀರ್ಣ ಆಗುವ ವಾಹನಗಳನ್ನು ಗುಜರಿಗೆ ಹಾಕಬೇಕು.

Advertisement

Udayavani is now on Telegram. Click here to join our channel and stay updated with the latest news.

Next