Advertisement

ಎಸ್‌ಸಿಪಿ-ಟಿಎಸ್‌ಪಿ ಅನುದಾನ ಡಿ.ಸಿ. ಮೂಲಕ ಬಿಡುಗಡೆ

01:05 AM Mar 29, 2022 | Team Udayavani |

ಬೆಂಗಳೂರು: ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಯಾಗುವ ಅನುದಾನವನ್ನು ಮುಂದಿನ ಆರ್ಥಿಕ ವರ್ಷ ದಿಂದ ಜಿಲ್ಲಾಧಿಕಾರಿ ಗಳಿಗೆ ಹಣ ಬಿಡುಗಡೆ ಮಾಡಿ ಶಾಸಕರ ಮೂಲಕ ವಿನಿಯೋಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಇಲಾಖಾವಾರು ಬೇಡಿಕೆಗಳ ಮೇಲಿನ ಚರ್ಚೆಗೆ ಅವರು ಉತ್ತರಿಸಿದರು.ಎಸ್‌ಸಿಪಿ-ಟಿಎಸ್‌ಪಿ ಕಾಯಿದೆ ಯಡಿ ಬಿಡುಗಡೆಯಾಗುವ ಅನುದಾನ ವನ್ನು ಇತರ ಕೆಲಸಗಳಿಗೆ ಬಳಸದಂತೆ ಕಾಯಿದೆಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ವಿನಯ ಸಾಮರಸ್ಯ
ರಾಜ್ಯದಲ್ಲಿ ಅಸ್ಪೃಶ್ಯತೆ ವಿರುದ್ಧ ಜನಾಂದೋಲನ ರೂಪಿಸಲು “ವಿನಯ ಸಾಮರಸ್ಯ’ ಯೋಜನೆ ರೂಪಿಸ ಲಾಗುವುದು. ಇತ್ತೀಚೆಗೆ ಕೊಪ್ಪಳದಲ್ಲಿ ದಲಿತ ಸಮು ದಾಯದ 2 ವರ್ಷದ ವಿನಯ್‌ ಎಂಬ ಮಗು ಪೋಷಕರ ಕೈತಪ್ಪಿಸಿ ದೇವಸ್ಥಾನ ಪ್ರವೇಶಿಸಿತು ಎಂಬ ಕಾರಣಕ್ಕೆ ಪೋಷಕರಿಗೆ ದಂಡ ವಿಧಿಸಿದಂತಹ ಅಮಾನವೀಯ ಘಟನೆ ನಡೆದಿದೆ. ಮುಂದೆ ಇಂತಹ ಘಟನೆ ಗಳು ಮರುಕಳಿಸ ಬಾರದೆಂಬ ಉದ್ದೇಶದಿಂದ ಆ ಮಗುವಿನ ಹೆಸರಿನಲ್ಲಿ ವಿನಯ ಸಾಮರಸ್ಯ ಯೋಜನೆ ಜಾರಿಗೊಳಿಸಿ, 6020 ಗ್ರಾಮ ಪಂಚಾಯತ್‌ಗಳಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ದೇವಸ್ಥಾನದ ಬೀಗ ಮುರಿದು ಕಳ್ಳತನಕ್ಕೆ ಯತ್ನ : ಇಬ್ಬರು ಬಾಲಕರು ವಶಕ್ಕೆ

ಕಾಮಗಾರಿ ಗುತ್ತಿಗೆ ಮಿತಿ ಹೆಚ್ಚಳ
ಸರಕಾರದ ಇಲಾಖೆಗಳಲ್ಲಿ 50 ಲಕ್ಷ ರೂ.ಮೊತ್ತದ ಕಾಮಗಾರಿ ಗುತ್ತಿಗೆಯಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸುವ ನೀತಿ ಇದ್ದು, ಇದನ್ನು ಒಂದು ಕೋಟಿ ರೂ.ಗೆ ಹೆಚ್ಚಿಸಬೇಕೆಂಬ ಆಗ್ರಹವಿದೆ. ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Advertisement

ಅಂತರ್ಜಾತಿ ವಿವಾಹಕ್ಕೆ ನೆರವು
ಅಂತರ್ಜಾತಿ ವಿವಾಹವಾಗುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದ್ದು, ಸುಮಾರು 2.5 ಲಕ್ಷ ಮಂದಿಗೆ ಬಾಕಿ ಇರುವ ಹಣ ನೀಡಲು 151 ಕೋ. ರೂ. ಬಿಡುಗಡೆ ಮಾಡಲಾಗಿದೆ. 2022-23ನೇ ಸಾಲಿನಲ್ಲಿ 50 ಸಾವಿರ ಮಂದಿಗೆ ಐಎಎಸ್‌, ಐಪಿಎಸ್‌ ಸಹಿತ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next